February 3, 2026

ಪತ್ನಿಯ ಅನೈತಿಕ ಸಂಬಂಧ: ತನ್ನ ಇಬ್ಬರು ಮಕ್ಕಳನ್ನು ಕೊಂದ ತಂದೆ

0
image_editor_output_image-264607793-1676181886781.jpg

ರಾಯಚೂರು: ಪತ್ನಿಯ ಅನೈತಿಕ ಸಂಬಂಧ ಆರೋಪ ಹಿನ್ನೆಲೆ ತಂದೆಯೇ ತನ್ನ ಎರಡು ಮಕ್ಕಳನ್ನ ಕೊಂದಿರುವ ಘಟನೆ ರಾಯಚೂರಿನ ದೇವದುರ್ಗದ ಜಕ್ಲೇರದೊಡ್ಡಿಯಲ್ಲಿ ನಡೆದಿದೆ.

5 ವರ್ಷದ ಶಿವರಾಜ್ ಮತ್ತು 3 ವರ್ಷದ ರಾಘವೇಂದ್ರ ತಂದೆಯಿಂದಲೇ ಕೊಲೆಯಾದ ಮಕ್ಕಳು. ಆರೋಪಿ ತಂದೆ ಲಿಂಗಣ್ಣನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪತ್ನಿಯೊಂದಿಗೆ ಜಗಳವಾಡಿ ಪತ್ನಿ ತವರು ಮನೆಯಿಂದ ಮಕ್ಕಳನ್ನ ಕರೆದುಕೊಂಡು ಬಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ನಿತ್ಯ ಜಗಳವಾಡುತ್ತಿದ್ದ ಹಿನ್ನೆಲೆ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು.

ಶನಿವಾರ ಸಹ ಪತ್ನಿಯೊಂದಿಗೆ ಜಗಳವಾಡಿ ಮಕ್ಕಳನ್ನ ಮನೆಗೆ ಕರೆತಂದು ಕೊಲೆ ಮಾಡಿದ್ದಾನೆ.

ಅಕ್ಕಪಕ್ಕದ ಮನೆಯವರು ಅನುಮಾನದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನ ಹಿಡಿದುಕೊಟ್ಟಿದ್ದಾರೆ.

ದೇವದುರ್ಗ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!