February 2, 2026

ಪರೋಟ ತಿಂದು ಫುಡ್ ಅಲರ್ಜಿ: ಪಿಯುಸಿ ವಿದ್ಯಾರ್ಥಿನಿ ಮೃತ್ಯು

0
image_editor_output_image1239762821-1676098781721.jpg

ಇಡುಕ್ಕಿ; ಪರೋಟ ತಿಂದ ಬಳಿಕ ಉಂಟಾದ ಫುಡ್ ಅಲರ್ಜಿಯಿಂದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿದೆ.

ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ
ನಯನಮರಿಯಾ(16) ಮೃತ ವಿದ್ಯಾರ್ಥಿನಿ.

ಈಕೆ ವಾಜತೊಪ್ಪುವಿನ ಸೆಂಟ್ ಜಾರ್ಜ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು.

ಈಕೆಗೆ ಪರೋಟ ತಿಂದ ಬಳಿಕ ಅಲರ್ಜಿ ಉಂಟಾಗಿತ್ತು. ಇದಕ್ಕೆ ಇಡುಕ್ಕಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಆರೋಗ್ಯ ತೀರಾ ಹದಗೆಟ್ಟ ಹಿನ್ನಲೆ ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!