ದಾವಣಗೆರೆ: ಹಿಟ್ ಆ್ಯಂಡ್ ರನ್: ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ದಾವಣಗೆರೆ: ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಆನಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.
ದಾವಣಗೆರೆ ನಗರದ ರಾಮನಗರ ನಿವಾಸಿಗಳಾದ ಪರಶುರಾಮ್ (24) ಸಂದೇಶ (23) ಶಿವು (26) ಮೃತಪಟ್ಟ ಯುವಕರು.
ಅಪಘಾತವು ತಡರಾತ್ರಿ ಸಂಭವಿಸಿದ ಕಾರಣ ತಡವಾಗಿ ಬೆಳಕಿಗೆ ಬಂದಿದೆ.




