ಬೈಂದೂರು| ಕೆಲಸದಿಂದ ಅಮಾನತು: ಕಂಬಳ ಓಟಗಾರ ನೇಣುಬಿಗಿದು ಆತ್ಮಹತ್ಯೆ
ಬೈಂದೂರು: ಶಿರೂರು ಟೋಲ್‌ಗೇಟ್ ಬಳಿಯ ನಿವಾಸಿ, ಕಂಬಳ ಓಟಗಾರ ಸುರೇಶ್ ಕಡಿನತಾರು (37 ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋರ್ಟ್ ಪ್ರೋಸೆಸ್ ಹುದ್ದೆಯಲ್ಲಿದ್ದ ಅವರು ಪ್ರಸ್ತುತ ಅಮಾನುತುಗೊಂಡಿದ್ದರು. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಟೋಲ್‌ಗೇಟ್ ಹಿಂಬದಿಯ ಸರಕಾರಿ ಹಾಡಿಯಲ್ಲಿ ಸುರೇಶ್ ಅವರ ಮೃತದೇಹವು ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




