ಚಿನ್ನದ ಬಿಸ್ಕೆಟ್, 6 ಲಕ್ಷ ರೂ. ನಗದು ದರೋಡೆ: ಮೂವರು ನಕಲಿ ಪೊಲೀಸರ ಬಂಧನ
ಬೆಂಗಳೂರು: ಪೊಲೀಸರೆಂದು ಬೆದರಿಸಿ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ರೂ. ನಗದು ದರೋಡೆ ಮಾಡಿದ್ದ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ಮಾಡಿದ್ದ ಹೋಮ್ ಗಾರ್ಡ್ ಹಾಗೂ ಇಬ್ಬರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೂವರೂ ವ್ಯಕ್ತಿಯೊಬ್ಬನನ್ನು ಟಾರ್ಗೆಟ್ ಮಾಡಿ ದರೋಡೆ ಮಾಡಿದ್ದರು. ಪೊಲೀಸರು ಎಂದು ಹೇಳಿಕೊಂಡು ವ್ಯಕ್ತಿಯಿಂದ ಚಿನ್ನ ಹಾಗೂ ನಗದು ದರೋಡೆ ಮಾಡಿದ್ದರು.
ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಸುಂದರಮ್ ಎಂಬ ವ್ಯಕ್ತಿ ಬಳಿ ಪೊಲೀಸರೆಂದು ಹೇಳಿ ಆರೋಪಿಗಳು ದರೋಡೆ ಮಾಡಿದ್ದರು.
ಸುಂದರಮ್ ಎಂಬಾತ ಚಿನ್ನದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡಿಕೊಂಡಿದ್ದಾರೆ. ಶಿವಮೊಗ್ಗದಿಂದ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ರೂ. ಹಣ ತಂದಿದ್ದರು.
ಅವರ ಬಳಿ ಚಿನ್ನ ಹಾಗೂ ಹಣ ಇರುವ ಬಗ್ಗೆ ಹೋಮ್ ಗಾರ್ಡ್ ಮಾಹಿತಿ ನೀಡಿದ್ದ. ನಂತರ ಆಟೋ ಚಾಲಕರು ಈ ಕೃತ್ಯ ಎಸಗಿದ್ದರು.




