March 20, 2026

ಕಾಪು: ಸ್ಕೂಟರ್‌ ಸ್ಕಿಡ್‌ ಸಹಸವಾರ ಮೃತ್ಯು

0
image_editor_output_image88256071-1676006108654.jpg

ಕಾಪು: ಐದು ದಿನಗಳ ಹಿಂದೆ ಸ್ಕೂಟರ್‌ ಸ್ಕಿಡ್‌ ಆಗಿ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಹಸವಾರ, ಕಾಪು ಪೊಲಿಪು ನಿವಾಸಿ, ಯುವ ಛಾಯಾಗ್ರಾಹಕ ಪ್ರೀತೇಶ್‌ (38) ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರು ತಂದೆ, ತಾಯಿ, ಪತ್ನಿ ಮತ್ತು ಮೂರು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.

ಪ್ರೀತೇಶ್‌ ಛಾಯಾಚಿತ್ರಗ್ರಾಹಕ ವೃತ್ತಿಯ ಬಿಡುವಿನ ವೇಳೆ ಮಲ್ಪೆಗೆ ಮೀನುಗಾರಿಕೆಗೆ ತೆರಳುತ್ತಿದ್ದು, ಫೆ. 4ರಂದು ಸಂಜೆ ಪಡುಕರೆ – ಕಾಪು ರಸ್ತೆಯಲ್ಲಿ ಸ್ನೇಹಿತ ಪ್ರಶಾಂತ್‌ ಕುಮಾರ್‌ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿತ್ತು.

ರಸ್ತೆಗೆ ಬಿದ್ದು ತಲೆಗೆ ಗಂಭೀರ ಏಟಾಗಿ, ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಿತೇಶ್‌ ಮತ್ತು ಸಣ್ಣಪುಟ್ಟ ಗಾಯಗೊಂಡಿದ್ದ ಪ್ರಶಾಂತ್‌ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿಂದ ವೈದ್ಯರ ಸೂಚನೆಯಂತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು

Leave a Reply

Your email address will not be published. Required fields are marked *

error: Content is protected !!