August 13, 2026

ಇಂಡೋನೇಷ್ಯಾ 5.4 ತೀವ್ರತೆಯಲ್ಲಿ ಭೂಕಂಪ: 4 ಮಂದಿ ಮೃತ್ಯು

0
a84d7dc1-728d-4f5a-9e25-c8af6c4c9493_16x9_1200x676.jpeg

ಜಕರ್ತಾ: ಇಂಡೋನೇಷ್ಯಾದ ಪಾಪುವಾ ಪ್ರಾಂತ್ಯದಲ್ಲಿ ಗುರುವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವಾರು ಕಟ್ಟಡಗಳು ನಾಶವಾಗಿವೆ ಎಂದು ವಿಪತ್ತು ಏಜೆನ್ಸಿ ಅಧಿಕಾರಿ ತಿಳಿಸಿದ್ದಾರೆ. ಈಗ ನಾವು ಭೂಕಂಪದ ಅಪಾಯದ ಮೌಲ್ಯಮಾಪನವನ್ನು ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಜಯಪುರದ ನಿವಾಸಿಗಳು, ಭೂಕಂಪ ಸಂಭವಿಸಿದಾಗ ಜನರು, ಮನೆಗಳು ಮತ್ತು ಅಂಗಡಿಗಳಿಂದ ಓಡಿಹೋಗಿದ್ದು, ಸುರಕ್ಷತೆಗಾಗಿ ಪರದಾಡಿದರು ಎಂದು ಹೇಳಿದರು.

ಹವಾಮಾನ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿ ಪ್ರಕಾರ, ಮಧ್ಯಾಹ್ನ 1.28ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಾಜಧಾನಿ ಜಯಪುರದ ನೈಋತ್ಯಕ್ಕೆ 1 ಕಿಮೀ ದೂರ ಹಾಗೂ 10 ಕಿಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಸುನಾಮಿಗೆ ಪ್ರಚೋದಿಸುವಷ್ಟು ಭೂಕಂಪದ ತೀವ್ರತೆ ಇಲ್ಲ ಎಂದು ಅದು ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!