February 3, 2026

ಫೆಬ್ರವರಿ 14 ‘COW HUG DAY’ ದಿನವಾಗಿ ಆಚರಿಸಲು ಸರ್ಕಾರದಿಂದ ಆದೇಶ

0
97732117.png

ದೆಹಲಿ: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಫೆಬ್ರವರಿ 14 ಅನ್ನು ‘ಆಕಳನ್ನು ಆಲಂಗಿಸುವ ದಿನ’ (Cow Hug Day) ಎಂದು ಆಚರಿಸಬೇಕು ಎಂದು ಹೇಳಿದೆ.

ಹಸುಗಳ ಬಗ್ಗೆ ತಿಳಿಯುವುದಕ್ಕೆ ಮತ್ತು ಅದು ಹೇಗೆ ಭಾರತದ ಸಮಾಜ ಮತ್ತು ಆರ್ಥಿಕತೆಯ ಬೆನ್ನೆಲುಬು ಆಗಿದೆ ಎಂಬುದನ್ನು ಸಂಭ್ರಮಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ನಮಗೆಲ್ಲರಿಗೂ ತಿಳಿದಿದೆ, ನಮ್ಮ ಜೀವನಕ್ಕೆ ಇದು ಬೇಕು. ಇದು ಜಾನುವಾರು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ತಾಯಿಯಂತೆ ಪೋಷಿಸುವ ಸ್ವಭಾವದ ಕಾರಣದಿಂದ ಇದನ್ನು ‘ಕಾಮಧೇನು’ ಮತ್ತು ‘ಗೋಮಾತಾ’ ಎಂದು ಕರೆಯಲಾಗುತ್ತದೆ. ಮಾನವೀಯತೆಗೆ ಎಲ್ಲಾ ಸಂಪತ್ತನ್ನು ನೀಡುವವಳು ಎಂದು ಮಂಡಳಿಯು ಫೆಬ್ರವರಿ 6 ರಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಶ್ಚಿಮಾತ್ಯ ಸಂಸ್ಕೃತಿಯು ವೈದಿಕ ಸಂಪ್ರದಾಯಗಳ ಅಳಿವಿಗೆ ಕಾರಣವಾಗುತ್ತಿರುವ ಕಾರಣ, ಈ ರೀತಿಯ ದಿನ ಅಗತ್ಯವಿದೆ. “ಗೋವಿನ ಅಪಾರ ಪ್ರಯೋಜನದ ದೃಷ್ಟಿಯಿಂದ ದನವನ್ನು ಅಪ್ಪಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಅದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಲ್ಲಾ ಹಸು ಪ್ರೇಮಿಗಳು ಫೆಬ್ರವರಿ 14 ಅನ್ನು ಆಕಳನ್ನು ಆಲಂಗಿಸುವ ದಿನವನ್ನಾಗಿ ಆಚರಿಸಬಹುದು, ತಾಯಿ ಹಸುವಿನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನು ಸಂತೋಷದಿಂದ ಮತ್ತು ಸಕಾರಾತ್ಮಕ ಶಕ್ತಿಯಿಂದ ಮಾಡಬಹುದು” ಎಂದು ಸರ್ಕಾರದ ಪ್ರಕಟಣೆಯಲ್ಲಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!