August 13, 2026

ಫಾಝಿಲ್ ಸಹೋದರನಿಗೆ ತಂಡದಿಂದ ಹಲ್ಲೆ ಪ್ರಕರಣ: ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ FIR ದಾಖಲು

0
image_editor_output_image979224900-1675920002769.jpg

ಮಂಗಳೂರು: ಸಂಘಪರಿವಾರದಿಂದ ಹತ್ಯೆಗೀಡಾದ ಸುರತ್ಕಲ್’ನ ಫಾಝಿಲ್ ಅವರ ಸಹೋದರನಿಗೆ ತಂಡದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಪ್ರೀತಂ ಶೆಟ್ಟಿ, ಆಕಾಶ್, ಪ್ರಕಾಶ್, ಬಂಟ್ವಾಳದ ಹರ್ಷಿತ್ ಸೇರಿ ಐವರಿದ್ದ ತಂಡ ಹಲ್ಲೆ ನಡೆಸಿದೆ ಎಂದು ಗಾಯಾಳು ಆದಿಲ್ ರವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಮಂಗಳಪೇಟೆಯ ನಿವಾಸಿಗಳಾದ ಆದಿಲ್ ಮೆಹರೂಫ್, ಉಮರ್ ಫಾರೂಕ್, ಅಬ್ದುಲ್ ಹಮೀದ್, ಉಮರ್ ಫಾರೂಕ್ ಎಂಬವರು ಕೊಲೆ ಬೆದರಿಕೆ ಹಾಕಿರುವುದಾಗಿ ನಾಗೇಶ್ ದೇವಾಡಿಗ ಎಂಬವರ ಪ್ರತಿ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!