March 20, 2026

ಉಕ್ಕುಡ: ಕರ್ನಾಟಕ ಮುಸ್ಲಿಂ ಜಮಾಅತ್ ಸ್ಥಾಪನೆ: ನೂತನ ಅಧ್ಯಕ್ಷರಾಗಿ ಮೂಸ ಕುಞಿ ಬುಡಾರ್ತಡ್ಕ ಆಯ್ಕೆ

0
IMG-20230208-WA0042.jpg

ವಿಟ್ಲ: ಕರ್ನಾಟಕ ಮುಸ್ಲಿಂ ಜಮಾಅತ್ ಶಾಖೆಯನ್ನು ಉಕ್ಕುಡದಲ್ಲಿ ಸ್ಥಾಪಿಸಲಾಯಿತು. ಮುಸ್ಲಿಂ ಜಮಾಅತ್ 2023ನೇ ಸಾಲಿನ ನೂತನ ಕಮಿಟಿ ಅಧ್ಯಕ್ಷರಾಗಿ ಮೂಸ ಕುಞಿ ಬುಡಾರ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ತ್ವೈಬ, ಕೋಶಾಧಿಕಾರಿಯಾಗಿ ಡಿ ಕೆ ಅಬ್ದುಲ್ ಖಾದರ್ ರವರನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಮೊದಲು
ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್‌ ಭಕ್ತಿಪೂರಕವಾಗಿ ನಡೆಸಲಾಯಿತು.

ಇದೇ ಸಂಧರ್ಭದಲ್ಲಿ ಹಮೀದ್ ಸಖಾಫಿ ಕನ್ಯಾನ ಪಾಡಿ ರವರು ಮಾತನಾಡಿ, ಸುನ್ನತ್ ಜಮಾಅತ್‌ನ ಸಂಘ ಕುಟುಂಬದ ಸದಸ್ಯರಾದರೆ ಸಿಗುವ ಲೌಕಿಕ ಮತ್ತು ಪಾರತ್ರಿಕ ಪುಣ್ಯಗಳ ಲಾಭಗಳ ಬಗ್ಗೆ ವಿವರಿಸಿದರು.

ಎಸ್‌ವೈಎಸ್ ಹಾಗೂ ಎಸ್ಎಸ್ಎಫ್ ನ ವಾರ್ಷಿಕ ಮಹಾ ಸಭೆ ನಡೆಸಿ, ಲೆಕ್ಕಪತ್ರ, ವರದಿಗಳನ್ನು ವಾಚಿಸಲಾಯಿತು.
ಎಸ್‌ವೈ‌ಎಸ್ ನ 2023-2024 ಸಾಲಿನ ನೂತನ ಅಧ್ಯಕ್ಷರಾಗಿ ಬಶೀರ್ ಹಿಮಮಿ ಸಖಾಫಿ, ಪ್ರದಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಉಕ್ಕುಡ, ಕೋಶಾಧಿಕಾರಿಯಾಗಿ ಶರೀಫ್ ಫಿಶ್, ದಅ್ ವಾ ಕಾರ್ಯದರ್ಶಿಯಾಗಿ ರಹೀಮ್ ಲತ್ವೀಫಿ, ಸಾಂತ್ವನ ಕಾರ್ಯದರ್ಶಿಯಾಗಿ ಅಶ್ರಫ್ ಉಕ್ಕುಡ ರವರನ್ನು ಆಯ್ಕೆ ಮಾಡಲಾಯಿತು.

ಎಸ್‌ಎಸ್‌ಎಫ್ ಉಕ್ಕುಡ ಶಾಖೆಯ 2023 ರ ನೂತನ ಅಧ್ಯಕ್ಷರಾಗಿ ಆಸಿಫ್, ಪ್ರಧಾನ ಕಾರ್ಯದರ್ಶಿಯಾಗಿ ಮೊಯಿದಿನ್ ಹಾಸಿಮ್ ಸೇರಾಜೆ, ಕೋಶಾಧಿಕಾರಿಯಾಗಿ ರಾಫಿ ತ್ವೈಭ ಆಯ್ಕೆಯಾದರು.
ಎಸ್‌ವೈ‌ಎಸ್ ನ ಮೇಲುಸ್ತುವಾರಿಯಾಗಿ ಕನ್ಯಾನ ಸೆಂಟರ್‌ ಅಧ್ಯಕ್ಷರಾದ ಸುಲೈಮಾನ್ ಸಖಾಫಿ ಅಂಗ್ರಿ, ಎಸ್‌ಎಸ್‌ಎಫ್ ನ ಮೇಲುಸ್ತುವಾರಿಯಾಗಿ ಉಕ್ಕುಡ ಸೆಕ್ಟರ್‌ನ ಅಧ್ಯಕ್ಷರಾದ ಹಾರಿಸ್ ಹಿಮಮಿ ಕೊಂಬರಬೆಟ್ಟು,ಇನ್ನಿತರರು ಆಗಮಿಸಿದ್ದರು.

Leave a Reply

Your email address will not be published. Required fields are marked *

error: Content is protected !!