March 26, 2026

ಐಸ್‌ಕ್ರೀಮ್‌ನಲ್ಲಿ ಪತ್ತೆಯಾಯ್ತು ಸತ್ತ ಕಪ್ಪೆ: ಮೂವರು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
 

0
hr-080223-ice.jpg

ತಮಿಳುನಾಡು: ಮಧುರೈನ ತಿರುಪರಂಕುಂಡ್ರಂನಲ್ಲಿ ಅಂಗಡಿಯೊಂದರಿಂದ ಖರೀದಿಸಿದ ಐಸ್ ಕ್ರೀಂ ಸೇವಿಸಿದ ಮೂವರು ಮಕ್ಕಳು ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಅನ್ಬುಸೆಲ್ವಂ ಎಂಬವರ ತನ್ನ ಪುತ್ರಿಯರಾದ ಮಿತ್ರಶ್ರೀ (9), ರಕ್ಷಶ್ರೀ (7) ಮತ್ತು ಸೊಸೆ ಧರಣಶ್ರೀ (3) ಅವರಿಗೆ ಹತ್ತಿರದ ಅಂಗಡಿಯಿಂದ ಐಸ್ ಕ್ರೀಮ್ ಖರೀದಿಸಿದ್ದರು.

ಇನ್ನು ಐಸ್ ಕ್ರೀಂ ಸೇವಿಸಿದ ಮೂವರು ಮಕ್ಕಳು ವಾಂತಿಯಿಂದ ಬಳಲುತ್ತಿದ್ದು, ತಿರುಪರಂಕುಂದ್ರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಐಸ್ ಕ್ರೀಮ್ ತಿನ್ನುವಾಗ ಮೂಲೆಯಲ್ಲಿ ಸಣ್ಣ ಕಪ್ಪೆ ಕಂಡುಬಂದಿದ್ದು, ನಂತರ ಮಕ್ಕಳು ಆತಂಕಗೊಂಡರು ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!