February 4, 2026

ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣ: ಆರೋಪಿಯನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಕಮಿಷನರ್‌ಗೆ ಮನವಿ

0
IMG-20230208-WA0034.jpg

ಮಂಗಳೂರು: ಇತ್ತೀಚೆಗೆ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ಜುವೆಲ್ಲರ್ಸ್ ನಲ್ಲಿ ರಾಘವೇಂದ್ರ ಆಚಾರ್ಯ ಇವರ ಕೊಲೆಯನ್ನು ಖಂಡಿಸಿ, ಕೊಲೆಗಾರರನ್ನು ಶೀಘ್ರವಾಗಿ ಬಂಧಿಸಿ ಸರಿಯಾದ ಶಿಕ್ಷೆಯನ್ನು ನೀಡುವಂತೆ ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘವು ದ.ಕ. ಜಿಲ್ಲಾ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಎಲ್. ಹರೀಶ್, ಪ್ರಕಾಶ್ ಹಲೇಜಿ, ಪ್ರವೀಣ್ .ಎಮ್. ಪ್ರಕಾಶ್ ಕುಂಟಾಡಿ, ಮತ್ತು ರಾಕೇಶ್ ಪಿ.ಎಸ್ ಇವರು ಉಪಸ್ಥಿತರಿದ್ದರು.

ನಗರದ ಹಂಪನ ಕಟ್ಟೆಯ ಜುವೆಲ್ಯರಿಯೊಂದಕ್ಕೆ ಕಳೆದ ಶುಕ್ರವಾರ ಹಾಡುಹಗಲೇ ನುಗ್ಗಿದ್ದ ದುಷ್ಕರ್ಮಿ ಸಿಬಂದಿ ರಾಘವ ಆಚಾರ್ಯ (55) ಅವರಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿ ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ.

Leave a Reply

Your email address will not be published. Required fields are marked *

You may have missed

error: Content is protected !!