ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ನಿಧನ
ಯುಎಇ: ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ (70) ದುಬೈ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುಷರಫ್ ರನ್ನು ಯುಎಇಯ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
1999 ರಲ್ಲಿ ಪಾಕಿಸ್ತಾನದ ಮಿಲಿಟರಿ ದಂಗೆಯ ನಂತರ ಮುಷರಫ್ ಪಾಕಿಸ್ತಾನದ ಹತ್ತನೇ ಅಧ್ಯಕ್ಷರಾಗಿದ್ದರು. ಅವರು 1998 ರಿಂದ 2001 ರವರೆಗೆ 10 ನೇ ಸಿಜೆಸಿಎಸ್ಸಿಯಾಗಿ ಮತ್ತು 1998 ರಿಂದ 2007 ರವರೆಗೆ 7 ನೇ ಉನ್ನತ ಜನರಲ್ ಆಗಿ ಸೇವೆ ಸಲ್ಲಿಸಿದರು.




