February 2, 2026

ಉಪ್ಪಳ: ಮನೆಯ ಬಾಗಿಲು ಮುರಿದು ಕಳವು: 8 ಪವನ್ ಚಿನ್ನ, 45 ಸಾವಿರ ರೂ. ನಗದು ಕದ್ದು ಪರಾರಿ

0
64cb6551-7b47-4343-95d4-1fe6a8304529.jpg

ಉಪ್ಪಳ: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 8 ಪವನ್ ಚಿನ್ನಾಭರಣ ಮತ್ತು 45 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ಉಪ್ಪಳದಲ್ಲಿ ನಡೆದಿದೆ.

ಹಿದಾಯತ್ ಬಜಾರ್‌ನ ಮುಹಮ್ಮದ್ ಸಲೀಂ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಲೀಂ ಗಲ್ಫ್‌ನಲ್ಲಿದ್ದು, ತಾಯಿ ಸಫಿಯಾ ಮನೆಗೆ ಬೀಗ ಹಾಕಿ ಸಾಲೆತ್ತೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಗಲ್ಫ್‌ನಲ್ಲಿರುವ ಸಲೀಂ ಮೊಬೈಲ್ ಫೋನ್ ಮೂಲಕ ಮನೆಯಲ್ಲಿರುವ ಸಿಸಿ ಟಿವಿ ದೃಶ್ಯ ಗಳನ್ನು ಗಮನಿಸಿದಾಗ ತಡರಾತ್ರಿ ಮನೆಯೊಳಗೆ ಓರ್ವ ಮುಸುಕುಧಾರಿಯಾಗಿ ತೆರಳುತ್ತಿರುವುದು ಗಮನಕ್ಕೆ ಬಂದಿದೆ.

ಇನ್ನು ತಕ್ಷಣ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮನೆಗೆ ಬಂದು ಗಮನಿಸಿದಾಗ ಮುಂಭಾಗದ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಮೇಲಂತಸ್ತಿನಲ್ಲಿದ್ದ ಒಂದು ಮತ್ತು ಕೆಳಗಡೆ ಇದ್ದ ಮೂರು ಕಪಾಟುಗಳನ್ನು ಒಡೆದು ವಸ್ತ್ರಗಳನ್ನು ಎಸೆದಿರುವುದು ಕಂಡು ಬಂದಿದೆ.

ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!