ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ರಶ್ಮಿ ಎಸ್.ಆರ್. ಅಧಿಕಾರ ಸ್ವೀಕಾರ

ಕುಂದಾಪುರ: ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾಗಿ (ಎಸಿ) ರಶ್ಮಿ ಎಸ್.ಆರ್. ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕುಂದಾಪುರ ಎಸಿಯಾಗಿದ್ದ ಕೆ. ರಾಜು ಅವರು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.
ಮಂಗಳೂರು ಮೂಲದ ರಶ್ಮಿ ಎಸ್. ಆರ್. ಅವರು 2014ನೇ ಬ್ಯಾಚ್‌ನ ಕೆಎಎಎಸ್ ಅಧಿಕಾರಿ. 2017ರಲ್ಲಿ ಮಂಗಳೂರಿನಲ್ಲಿ ಪ್ರೊಬೇಷನರಿ ಅವಧಿ ಮುಗಿಸಿ, 2019 ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದು, ಈ ಮಧ್ಯೆ ಲೋಕಸಭಾ ಹಾಗೂ ಗ್ರಾ.ಪಂ. ಚುನಾವಣೆ ವೇಳೆ ಕಾಪು ತಹಶೀಲ್ದಾರ್ ಆಗಿಯೂ ಸೇವೆ ಸಲ್ಲಿಸಿ, ಬಳಿಕ ಬಂಟ್ವಾಳಕ್ಕೆ ವಾಪಾಸ್ಸಾಗಿದ್ದರು. 2022ರಲ್ಲಿ ದ.ಕ. ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದು, ಈಗ ಕುಂದಾಪುರ ಎಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.