August 13, 2026

ಕುಂದಾಪುರ: ತಾಯಿಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಮಗ ನದಿಗೆ ಹಾರಿ ಆತ್ಮಹತ್ಯೆ

0
IMG-20230128-WA0060.jpg

ಕುಂದಾಪುರ: ರಾ.ಹೆ. 66ರ ತಲ್ಲೂರು ಸಮೀಪದ ರಾಜಾಡಿಯಲ್ಲಿ ಯುವಕನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕನ್ಯಾನ ಗ್ರಾಮದ ರವಿರಾಜ್‌ ಶೆಟ್ಟಿ (33) ಆತ್ಮಹತ್ಯೆ ಮಾಡಿಕೊಂಡ ಯುವಕ.

ಅನಾರೋಗ್ಯದಿಂದ ಬಳಲುತ್ತಿದ್ದ, ಕುಡಿತದ ಚಟ ಹೊಂದಿದ್ದ ರವಿರಾಜ್‌ ಅವರನ್ನು ತಾಯಿ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಅಲ್ಲಿಂದ ಹೇಳದೆ ಕೇಳದೇ ಬಂದು, ತಲ್ಲೂರು ಸಮೀಪದ ರಾಜಾಡಿಯ ಹೆದ್ದಾರಿಯಲ್ಲಿರುವ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಮೃತದೇಹವನ್ನು ಮೇಲೆತ್ತಲಾಗಿದೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!