August 13, 2026

ಕಾಸರಗೋಡು: ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

0
IMG-20230128-WA0058.jpg

ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ.

ಬಂಧಿತರನ್ನು ಕುಂಬಳೆ ಬಂಬ್ರಾಣದ ಅಬ್ದುಲ್ ರುಮೈಸ್ (27) ಮತ್ತು ಉಪ್ಪಳ ಪೆರಿಂಗಡಿಯ ಎಂ.ಕೆ ಮುಸ್ತಾಫಾ (39) ಎಂದು ಗುರುತಿಸಲಾಗಿದೆ.

ಇವರಿಂದ 69 ಗ್ರಾಂ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಉಪ್ಪಳ ಪೇಟೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!