ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಆವರಣದಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ಕಲ್ಲಡ್ಕ: ನಮ್ಮ ಹಿರಿಯರು ಪೂರ್ವಿಕರು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿ ಪಡೆದ ದೇಶದ ಸ್ವಾತಂತ್ರ್ಯ ವನ್ನು ಸುಂದರ ಸಂವಿಧಾನವನ್ನು ಇನ್ನಷ್ಟು ಶಕ್ತಿ ಪಡಿಸೋಣ, ಸಂವಿಧಾನ ಅಮರ ಎಂದು ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸ ಸದರ್ ಅಬ್ದುಲ್ ಲತೀಫ್ ದಾರಿಮಿ ಅಭಿಪ್ರಾಯ ಪಟ್ಟರು.

ಅವರು ಇಂದು ಕಲ್ಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯ ದಲ್ಲಿ ಪ್ರಜಾಪ್ರಭುತ್ವ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿರಿಯರಾದ ಚೆರೆಮೋನು ಮುಕ್ರಿಕ ಧ್ವಜಾರೋಹಣಗೈದರು.
ವೇದಿಕೆಯಲ್ಲಿ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್, ಜತೆ ಕಾರ್ಯದರ್ಶಿ ಸಾಧಿಕ್,ಕೋಶಾಧಿಕಾರಿ ನವಾಝ್ ಉಪಸ್ಥಿತರಿದ್ದರು.
ಹಾಫಿಳ್ ಇಸ್ಮಾಯಿಲ್ ಹನೀಫಿ ಸ್ವಾಗತಿಸಿದರು. ವಿಧ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಅಬ್ದುಲ್ ಹಮೀದ್ ಗೋಳ್ತಮಜಲ್ ವಂದಿಸಿದರು.




