August 15, 2026

ಮಾಣಿ: ಸೂರಿಕುಮೇರು ಸುನ್ನೀ ಸಂಘಟನೆಯಿಂದ ಗಣರಾಜ್ಯೋತ್ಸವ ಆಚರಣೆ

0
IMG-20230126-WA0009.jpg

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಸೂರಿಕುಮೇರು ಮತ್ತು ಎಸ್ಸೆಸ್ಸೆಫ್,ಕರ್ನಾಟಕ ಮುಸ್ಲಿಂ ಜಮಾ‌ಅತ್ ಸೂರಿಕುಮೇರು ಘಟಕಗಳ ಆಶ್ರಯದಲ್ಲಿ ಇಲ್ಲಿನ ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ಕರ್ನಾಟಕ ಮುಸ್ಲಿಂ ಜಮಾ‌ಅತ್ ಸೂರಿಕುಮೇರು ಘಟಕ ಅಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರು ಧ್ವಜಾರೋಹಣ ಮಾಡಿದರು,ಅಜ್ಮಲ್ ಮಾಣಿ ,ಇಮ್ರಾನ್ ಸೂರಿಕುಮೇರು,ರಾಷ್ಟ್ರಗೀತೆ ಹಾಡಿದರು,ಅಜ್ಮಲ್ ಮಾಣಿ ಪ್ರಾಸ್ತಾವಿಕ ನುಡಿಗಳ ಮೂಲಕ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಯಕರುಗಳಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಎಸ್‌ವೈ‌ಎಸ್ ಕೋಶಾಧಿಕಾರಿ ಹನೀಫ್ ಸಂಕ,ಕಾರ್ಯದರ್ಶಿ ಸಲೀಂ ಮಾಣಿ,ಉಮ್ಮರ್ ಸೂರಿಕುಮೇರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!