May 11, 2026

ಮೂಲ್ಕಿ: ಸ್ಕಿಡ್‌ ಆಗಿ ಗೂಡಂಗಡಿಯ ಮೇಲೆ ಬಿದ್ದ ಕಂಟೈನರ್‌ ಲಾರಿ: ಚಾಲಕನಿಗೆ ಗಂಭೀರ ಗಾಯ

0
accident11.jpg

ಮೂಲ್ಕಿ: ಉಡುಪಿ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಕಂಟೈನರ್‌ ಲಾರಿಯೊಂದು ಹೆದ್ದಾರಿಯ ಕಾರ್ನಾಡು ಪೆಟ್ರೋಲ್‌ ಬಂಕ್‌ನ ಕೈಗಾರಿಕಾ ಪ್ರದೇಶದ ತಿರುವಿನ ರಸ್ತೆ ಬಳಿ ಸ್ಕಿಡ್‌ ಆಗಿ ಬಿದ್ದು ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ರಸ್ತೆ ಬದಿಯಲ್ಲಿ ರೆಕ್ಸಿನ್‌ ವ್ಯವಹಾರ ನಡೆಸುತ್ತಿದ್ದ ಗೂಡಂಗಡಿಯ ಮೇಲೆಯೇ ಈ ಕಂಟೈನರ್‌ ಬಿದ್ದಿದೆ.

ಇನ್ನು ಅದೃಷ್ಟವಶಾತ್ ಅಂಗಡಿಯಲ್ಲಿ ಯಾರೂ ಇಲ್ಲದಿದ್ದುದರಿಂದ ಹೆಚ್ಚಿನ ಅವಘಡ ತಪ್ಪಿದಂತಾಗಿದೆ.

ಗೂಡಂಗಡಿಯ ಮೇಲೆಯೇ ಈ ಕಂಟೈನರ್‌ ಬಿದ್ದ ಹಿನ್ನೆಲೆಯಲ್ಲಿ ಗೂಂಡಾಂಗಡಿಯ ಎಲ್ಲ ಸೊತ್ತುಗಳು ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!