February 3, 2026

ಜಲ್ಲಿಕಟ್ಟು ಸ್ಪರ್ಧೆ ನೋಡಲು ಬಂದಿದ್ದ ಬಾಲಕನಿಗೆ ಹೋರಿ ತಿವಿದು ಸಾವು

0
image_editor_output_image718735418-1674361625975.jpg

ಚೆನ್ನೈ: ಜಲ್ಲಿಕಟ್ಟು ಸ್ಪರ್ಧೆ ನೋಡಲು ಬಂದಿದ್ದ ಬಾಲಕನಿಗೆ ಹೋರಿ ತಿವಿದು ಬಾಲಕ ಮೃತಪಟ್ಟ ಘಟನೆ ಧರ್ಮಪುರಿಯ ತಡಂಗಂ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ಗೋಕುಲ್ (14) ಎಂದು ಗುರುತಿಸಲಾಗಿದೆ. ಗೋಕುಲ್ ಸಂಬಂಧಿಕರೊಂದಿಗೆ ತಡಂಗಂ ಗ್ರಾಮದಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಸ್ವರ್ಧೆಗೆ ಆಗಮಿಸಿದ್ದ. ಈ ವೇಳೆ ಸ್ಪರ್ಧೆಯಲ್ಲಿದ್ದ ಹೋರಿಯೊಂದು ಕೂತಿದ್ದ ಗೋಕುಲ್ ಹೊಟ್ಟೆಗೆ ತಿವಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗೋಕುಲ್‍ನನ್ನು ಧರ್ಮಪುರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಬಾಲಕ ಮೃತಪಟ್ಟಿದ್ದ.
ಈ ಬಗ್ಗೆ ಧರ್ಮಪುರಿ ಠಾಣೆ ಪೊಲೀಸರು ಗೋಕುಲ್ ಗಾಯಗೊಂಡ ಬಗ್ಗೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ವರ್ಷ ಜಲ್ಲಿಕಟ್ಟು ಸ್ವರ್ಧೆಗೆ ತಮಿಳುನಾಡಿನಲ್ಲಿ ಈವರೆಗೆ ನಾಲ್ಕು ಜನ ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!