February 3, 2026

ಕಾಲೇಜಿನ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಅಪರ್ಣಾ ಜೊತೆ ಅನುಚಿತ ವರ್ತನೆ: ವಿದ್ಯಾರ್ಥಿಯ ಅಮಾನತು

0
image_editor_output_image1893974821-1674356369626.jpg

ಕೇರಳ: ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಕೇರಳದ ಕಾಲೇಜಿಗೆ ಅತಿಥಿಯಾಗಿ ಹೋಗಿದ್ದರು.

ಈ ಸಮಯದಲ್ಲಿ ವೇದಿಕೆಯ ಮೇಲೆಯೇ ಆ ಕಾಲೇಜಿನ ವಿದ್ಯಾರ್ಥಿಯೊಬ್ಬ ನಟಿಯ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಆ ಹುಡುಗನ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮಹಿಳೆಯರ ರಕ್ಷಣೆ ಕುರಿತಾಗಿಯೂ ಚರ್ಚೆ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ನಟಿಗೆ ಕ್ಷಮೆ ಕೇಳಿದೆ.

ಈ ಘಟನೆಯಿಂದಾಗಿ ನಮ್ಮ ಕಾಲೇಜಿಗೂ ಕೆಟ್ಟ ಹೆಸರು ಬಂದಿದೆ. ನಮಗೂ ತಲೆತಗ್ಗಿಸುವಂತಹ ವಿಚಾರವಿದು. ನಿಮ್ಮೊಂದಿಗೆ ಆ ಹುಡುಗ ಆ ರೀತಿ ನಡೆದುಕೊಂಡಿದ್ದು ತುಂಬಾ ನೋವಾಗಿದೆ. ಹಾಗಾಗಿ ಕ್ಷಮೆ ಕೇಳುತ್ತೇವೆ.

ಕೇವಲ ಕ್ಷಮೆ ಮಾತ್ರವಲ್ಲ, ಆ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ರೀತಿ ಯಾರೂ ನಡೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!