August 15, 2026

ಪಡುಬಿದ್ರಿ: ಬೈಕ್‌ ಢಿಕ್ಕಿ: ಪಾದಚಾರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

0
IMG-20230121-WA0039.jpg

ಪಡುಬಿದ್ರಿ: ಪಡುಬಿದ್ರಿಯಲ್ಲಿ ಹೆದ್ದಾರಿಯನ್ನು ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಬೈಕ್‌ ಢಿಕ್ಕಿ ಹೊಡೆದಿದ್ದು, ಪಾದಾಚಾರಿ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ತೀವ್ರತರ ಗಾಯಗೊಂಡಿದ್ದಾರೆ.

ಬೆಳ್ಮಣ್‌ ನಿವಾಸಿ ಸದಾನಂದ ದೇವಾಡಿಗ(48) ಗಾಯಗೊಂಡವರು.

ಪಡುಬಿದ್ರಿಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.

ಬೈಕ್‌ ಸವಾರ ಯಶವಂತ್‌ ಅವರ ಬಲಭುಜ ಹಾಗೂ ತುಟಿಗಳಿಗೆ ಗಾಯಗೊಂಡಿದ್ದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!