May 17, 2026

ಉಪ್ಪಿನಂಗಡಿ: ಜೋಗಿಬೆಟ್ಟು ರಿಫಾಯಿ ಜುಮಾ ಮಸ್ಜಿದ್ ನಲ್ಲಿ ಫೆ.13ರಂದು ಬೃಹತ್ ರಿಫಾಯಿ ರಾತೀಬ್ ಮಜ್ಲಿಸ್ ಕಾರ್ಯಕ್ರಮ

0
IMG-20230120-WA0183

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಜೋಗಿಬೆಟ್ಟು ರಿಫಾಯಿ ಜುಮಾ ಮಸ್ಜಿದ್ ವತಿಯಿಂದ ತಾಜುಲ್ ಆರೀಫಿನ್ ಅಹ್ಮ ದುಲ್ ಕಬೀರ್ ರಿಫಾಯಿ ತಂಙಳ್ ರವರ ಅನುಸ್ಮರಣಾರ್ಥ ಎರಡು ದಿವಸಗಳ ಧಾರ್ಮಿಕ ಪ್ರವಚನ  ಮತ್ತು ಬೃಹತ್ ರಿಫಾಯಿ ರಾತೀಬ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.

ಫೆ. 11 ಮತ್ತು 12 ರಂದು ಧಾರ್ಮಿಕ‌ ಮತ ಪ್ರವಚನ ಮತ್ತು ಫೆ.13 ರಂದು 
ಬೃಹತ್ ರಿಫಾಯಿ ರಾತೀಬ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನೂರುಲ್ ಜಲಾಲಿಯ ಅಲ್ ಹಾಜ್ ಅಸ್ಸಯ್ಯಿದ್ ಮುಹಮ್ಮದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್, ಸಯ್ಯಿದ್ ಅಹ್ ಮದ್ ಮುಕ್ತಾರ್ ತಂಙಳ್ ಕುಂಬೋಳ್ ನೇತೃತ್ವ ಮತ್ತು ದುವಾಃ ಆಶೀರ್ವಚನ ನೀಡಲಿದ್ದಾರೆ. ಫೆ. 11 ಮತ್ತು 12 ರಂದು ನಡೆಯಲಿರುವ ಧಾರ್ಮಿಕ ಮತ ಪ್ರವಚನದಲ್ಲಿ ಎಂ ಎ ಸಲಾಹುದ್ದೀನ್ ಸಖಾಫಿ ಮತ್ತು ಅಬ್ದುಲ್ ಸಲಾಂ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!