February 4, 2026

ಮಂಗಳೂರು: ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ: ಬನ್ನಿ ಪ್ರಜಾ ದ್ವನಿ ಯಾತ್ರೆ ಯಶಸ್ವಿಗೊಳಿಸಿ: ಸುಭಾಶ್ಚಂದ್ರ ಶೆಟ್ಟಿ ಕರೆ

0
IMG-20230120-WA0026.jpg

ಮಂಗಳೂರು: ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದ್ದು, ಪ್ರಜಾ ದ್ವನಿ ಯಾತ್ರೆಯಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಿ ಎಂದು ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದ್ದಾರೆ.

ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸಂವಿಧಾನದಲ್ಲಿ ಸಮಾನ ಅವಕಾಶ ನೀಡಿದ ಕಾಂಗ್ರೆಸ್ ಸರಕಾರ ಅಧಿಕಾರ, ಹಣಕಾಸು ಹಾಗೂ ಯೋಜನೆಗಳ ಜೊತೆಗೆ ಗೌರವದ ಸ್ವಾಭಿಮಾನದ ಬದುಕು ರೂಪಿಸಿದ ಹಿಂದಿನ ಕಾಂಗ್ರೆಸ್ ಸರಕಾರ ಗಳು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕುವ ಮೂಲಕ ಗಾಂಧೀಜಿ ಯವರ ರಾಮ ರಾಜ್ಯದ ಕನಸನ್ನ ಸಾಕಾರಗೊಳಿಸಿತ್ತು. ಆದರೆ ಆನಂತರ ಬಂದ ಬಿಜೆಪಿ ಸರಕಾರ ಅವಕಾಶ, ಅಧಿಕಾರ ಹಣಕಾಸು ಎಲ್ಲವನ್ನು ಕಿತ್ತುಕೊಂಡು ಭ್ರಷ್ಟಾಚಾರ, ಬೆಲೆಯೇರಿಕೆ ಮೂಲಕ ಗ್ರಾಮೀಣ ಜನರ ಬದುಕನ್ನು ದುಷ್ಟರಗೋಳಿಸಿ ರಾಮರಾಜ್ಯದ ಕನಸನ್ನು ಭಗ್ನಗೊಳಿಸಿ ಗ್ರಾಮದ ಅಭಿವೃದ್ಧಿಗೆ ತಿಲಾಂಜಲಿಯಿಟ್ಟಿದೆ , ಈ ಸರಕಾರವನ್ನು ಕಿತ್ತೆಸೆದು ಮರಳಿ ಕಾಂಗ್ರೆಸ್ ಸರಕಾರ ಸ್ಥಾಪಿಸಲು ಜನವರಿ 22ರಂದು ಮಂಗಳೂರಿನಲ್ಲಿ ನಡೆಯುವ ಪ್ರಜಾದ್ವನಿ ಯಾತ್ರೆಯಲ್ಲಿ ಸಂಜೆ 4ಗಂಟೆಗೆ ಜಿಲ್ಲೆಯ ಎಲ್ಲಾ ಪಂಚಾಯತ್ ಪ್ರತಿನಿಧಿಗಳು, ಮಾಜಿಜಿಲ್ಲಾ ಮತ್ತು ತಾಲೂಕ್ ಪಂಚಾಯತ್ ಸದಸ್ಯರು ಹಾಗೂ ನಗರ, ಪಟ್ಟಣ ಪಂಚಾಯತ್ ಸದಸ್ಯರು ಸೇರಿದಂತೆ ಎಲ್ಲಾ ಪ್ರಜ್ಞಾವಂತ ನಾಗರಿಕರು ಕರಾವಳಿ ಮೈದಾನದಲ್ಲಿ ಬಾಗವಹಿಸಿ ನಮ್ಮ ನಾಯಕರೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!