February 3, 2026

ಉಡುಪಿ: ಗದ್ದೆಯಲ್ಲಿ ಜಿಂಕೆ ಪತ್ತೆ: ಅರಣ್ಯ ಅಧಿಕಾರಿಗಳಿಂದ ರಕ್ಷಣೆ

0
IMG-20230118-WA0049.jpg

ಉಡುಪಿ: ಪರ್ಕಳ ಇಲ್ಲಿನ ಹೆರ್ಗದ ಗಣಪತಿ ಮಠದ ಬಳಿ ವಿಠಲ ಶೆಟ್ಟಿಯವರ ಗದ್ದೆಯಲ್ಲಿ ಜಿಂಕೆಯೊಂದು ಪತ್ತೆಯಾಗಿದೆ.

ನಾಯಿಗಳು ಅಟ್ಟಾಡಿಸಿಕೊಂಡು ಬರುವಾಗ ಈ ಜಿಂಕೆ ಅಟ್ಟಾಡಿಸಿವಿಕೆಯಿಂದ ಬೆದರಿ ವಿಠಲಶೆಟ್ಟಿಯವರ ದನದ ಕೊಟ್ಟಿಗೆಯ ಒಳಹೊಕ್ಕು ರಕ್ಷಣೆಗೆ ಮೊರೆಹೋಗಿದೆ. ಜಿಂಕೆಯ ಬಲಕಾಲಿನಲ್ಲಿ ಗಾಯವಾಗಿ ಊದಿಕೊಂಡು ರಕ್ತದ ಮಡಿವಿನಲ್ಲಿತ್ತು.

ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ. ದಿವಾಕರ್ ಶೆಟ್ಟಿ ಶುಭಕರ ಶೆಟ್ಟಿ. ವಿಘ್ನೇಶ್ ಕೆದ್ಲಾಯ. ವಿಕ್ರಂ ಕೆದ್ಲಾಯ. ಅಶೋಕ್ ಶೆಟ್ಟಿ ಗುಣಪಾಲ್ ಶೆಟ್ಟಿ ಮೊದಲಾದವರು ಸಹಕರಿಸಿದರು ಈ ಜಿಂಕೆಗೆಸುಮಾರು ಮೂರ್ನಾಲ್ಕು ವರ್ಷಗಳಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿಯ ಅರಣ್ಯ ಅಧಿಕಾರಿಗಳು ಜಿಂಕೆ ಇರುವ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಸುರಕ್ಷಿತವಾಗಿ ಪಶುವೈದ್ಯ ಡಾ|ಪ್ರಶಾಂತ್ ಶೆಟ್ಟಿ ಅವರ ಸಲಹೆ ಮೇರೆಗೆ ಮಣಿಪಾಲ ಬಡಗುಗಟ್ಟಿನಲ್ಲಿರುವ ಟಿ ಪಾರ್ಕಿಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಯಿತು.

Leave a Reply

Your email address will not be published. Required fields are marked *

error: Content is protected !!