March 19, 2026

ಅಣೆಕಟ್ಟಿನಲ್ಲಿ ಈಜಲು ತೆರಳಿದ ಒಂದೇ ಕುಟುಂಬದ ನಾಲ್ವರು ನೀರುಪಾಲು

0
Screenshot_2023-01-17-11-15-28-61_680d03679600f7af0b4c700c6b270fe7.jpg

ತೆಲಂಗಾಣ: ಅಣೆಕಟ್ಟಿನಲ್ಲಿ ಈಜಲು ತೆರಳಿದ ಒಂದೇ ಕುಟುಂಬದ ನಾಲ್ವರು ನೀರು ಪಾಲಾದ ಘಟನೆ ವಿಕಾರಾಬಾದ್ ಜಿಲ್ಲೆಯ ಕೋಟೆಪಲ್ಲಿ ಅಣೆಕಟ್ಟಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮಣ್ಣೆಗುಡ ನಿವಾಸಿಗಳಾದ ಲೋಕೇಶ್, ಜಗದೀಶ್, ವೆಂಕಟೇಶ್ ಮತ್ತು ರಾಜೇಶ್ ಮೃತ ದುರ್ದೈವಿಗಳು. ಸ್ಥಳೀಯರ ನೆರವಿನಿಂದ ನಾಲ್ವರ ಶವಗಳನ್ನೂ ಅಣೆಕಟ್ಟಿನಿಂದ ಹೊರ ತೆಗೆಯಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಶವಗಳನ್ನು ವಿಕಾರಾಬಾದ್ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!