August 13, 2026

ಮಂಗಳೂರು : ನಾಲೆಗೆ ಬಿದ್ದ ಸರಕು ತುಂಬಿದ ಟ್ರಕ್: ಇಬ್ಬರ ರಕ್ಷಣೆ, ಸಂಚಾರ ಅಸ್ತವ್ಯಸ್ತ

0
IMG-20230116-WA0044.jpg

ಮಂಗಳೂರು : ಮಂಗಳೂರು ನಗರದ ಜಪ್ಪಿನ ಮೊಗರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ತುಂಬಿದ ಟ್ರಕ್ ನಾಲೆಗೆ ಬಿದ್ದಿರುವ ಘಟನೆ ನಡೆದಿದ್ದು, ಲಾರಿಯಲ್ಲಿ ಡ್ರೈವರ್ ಸೇರಿ ಇಬ್ಬರು ಇದ್ದು ಓರ್ವನನ್ನು ಸ್ಥಳೀಯರುರಕ್ಷಿಸಿದ್ದಾರೆ.

ತಮಿಳುನಾಡು ನೋಂದಣಿಯ ಲಾರಿ ವೈಟ್ ಸಿಮೆಂಟ್ ಸರಕು ತುಂಬಿಕೊಂಡು ಕೇರಳದತ್ತ ಚಲಿಸುತ್ತಿದ್ದಾಗ ಲಾರಿಯ ಮುಂಭಾಗದ ಟಯರು ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಮಲಿನ ನೀರು ಶೇಖರಣೆಯಾಗುತ್ತಿದ್ದ ಕೊಳಚೆ ಗುಂಡಿಗೆ ಬಿದ್ದಿದೆ.

ಇನ್ನು ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳ ಸ್ಥಳೀಯರು ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು,ಅಪಘಾತದಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!