August 13, 2026

ಕಲ್ಲಡ್ಕ: ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ಕಾರ್ಯಾಗಾರ

0
IMG-20230116-WA0037.jpg

ವಿಟ್ಲ: ಮಕ್ಕಳ ಮೆದುಳಿನ ಶಕ್ತಿ ಅದ್ಭುತ ಪ್ರತಿ ದಿನ ರಕ್ಷಕರು ಉತ್ತಮ ಮಾಹಿತಿ ನೀಡಿ ದಲ್ಲಿ ಮಕ್ಕಳ ಮೆದುಳಿನ ಶಕ್ತಿಯನ್ನು ಮತ್ತಷ್ಟು ಬಲಿಷ್ಠ ಗೊಳಿಸಲು ಸಾಧ್ಯ ಎಂದು ರಹ್ಮಾನಿಯ ಜುಮ್ಮಾ ಮಸೀದಿ ಅದ್ಯಕ್ಷರಾದ ಮಹಮ್ಮದ್ ಹನೀಫ್ ಅಭಿಪ್ರಾಯ ಪಟ್ಟರು.

ಅವರು ಇಂದು ಕಲ್ಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಸಮಿತಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪರೀಕ್ಷಾ ಪೂರ್ವ ಸಿದ್ದತಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿ ಯಾಗಿ ಮಾತಾಡುತ್ತಿದ್ದರು.

ಸಮಾರಂಭ ಉದ್ಘಾಟಿಸಿದ ರಹ್ಮಾನಿಯ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಮಾತಾಡಿ ಸಾಧನೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗೌರವ ಸಿಗಲಿದೆ ಉನ್ನತ ಮಟ್ಟ ಅಲಂಕರಿಸಿರಿ ಎಂದು ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಮಾತಾಡಿ ಸಾಧಕರಿಗೂ, ಸಾಧನೆಇಲ್ಲದವರಿಗೂ ದಿನದ ಇಪ್ಪತ್ತನಾಲ್ಕು ಗಂಟೆ ಮಾತ್ರ ಇರುವುದು ಈ ಅವಕಾಶವನ್ನು ಕೈ ಚೆಲ್ಲದಿರಿ ಸಾಧನೆ ಮಾಡಿರಿ ಎಂದು ವಿದ್ಯಾರ್ಥಿಗಳನ್ನು ಹುರಿ ದುಂಬಿಸಿದರು.

ಮುನೀರುಲ್ ಇಸ್ಲಾಂ ಮದ್ರಸ ಕಲ್ಲಡ್ಕ ಸದರ್ ಅಬ್ದುಲ್ ಲತೀಫ್ ದಾರಿಮಿ ಪ್ರಾರ್ಥಿಸಿದರು.ಕಲ್ಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಅದ್ಯಕ್ಷರಾದ ಅಬೂಬಕ್ಕರ್ ಹಾಜಿ ಅದ್ಯಕ್ಷತೆ ವಹಿಸಿದರು. ಕಲ್ಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!