ಇನ್ನೋವಾ ಕಾರು, ಆಟೋ ನಡುವೆ ಅಪಘಾತ: ಆಟೋದಲ್ಲಿದ್ದ ಬಾಲಕ ಸಾವು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತುಮಕೂರು: ಇನ್ನೋವಾ ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ಬಾಲಕ ಸಾವನ್ನಪ್ಪಿ 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕನನ್ನು ವರ್ಷಿತ್ ರೆಡ್ಡಿ(14) ಎಂದು ಗುರುತಿಸಲಾಗಿದೆ.
ಪಾವಗಡ ತಾಲೂಕಿನ ಟಿ.ಎನ್.ಪೇಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಪೆನಗೊಂಡದಿಂದ ಚಿತ್ರದುರ್ಗ ಕಡಗೆ ಹೋಗುತ್ತಿದ್ದ ಕಾರು, ರೊದ್ದಂ ಗ್ರಾಮದಿಂದ ಪಾವಗಡ ಕಡೆಗೆ ಬರುತ್ತಿದ್ದ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.




