February 3, 2026

ಚಿಕ್ಕಮಗಳೂರು: ಡೆತ್ ನೋಟ್ ನಲ್ಲಿ ಬಿಜೆಪಿ ಕಾರ್ಯಕರ್ತನ ಹೆಸರು ಬರೆದಿಟ್ಟು ಅಪ್ರಾಪ್ತ ಯುವತಿ ಆತ್ಮಹತ್ಯೆ

0
n46224022016737804472619c811dcc8b82adc9ef2ae31ae41e9e9fc51c0f5ab860ecf59f0765bbfc312885.jpg

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳಸ ತಾಲೂಕಿನ ಕುದುರೆ ಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾಗಿರುವ ಬಾಲಕಿಯನ್ನು 17 ವರ್ಷದ ದೀಪ್ತಿ ಎಂದು ಗುರುತಿಸಲಾಗಿದ್ದು, ಜನವರಿ 14 ರಂದು ಮಂಗಳೂರಿನ ಏಜೆ ಆಸ್ಪತ್ರೆಯಲ್ಲಿ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.

ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯಾಗಿದ್ದ ದೀಪ್ತಿ, ಜನವರಿ 10ರಂದು ಮನೆಯಲ್ಲಿದ್ದ ಕಳೆ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಾಯುವ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದ ಬಾಲಕಿ, ಪ್ರೀತಿಸಿ ವಂಚಿನೆ ಮಾಡಿರುವ ಆರೋಪವನ್ನು ಬಿಜೆಪಿ ಕಾರ್ಯಕರ್ತ ಆರೋಪಿ ಹಿತೇಶ್ (25) ಮೇಲೆ ಮಾಡಿದ್ದಾಳೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!