August 13, 2026

ಮಂಗಳೂರು: 35ಕ್ಕೂ ಅಧಿಕ ಕಳ್ಳತನ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಬಂಧನ

0
n462224698167377970933750a1a2f38bb522c1592b0a4ea073254919985ecac0791a996a9f6608d1d561c3.jpg

ಮಂಗಳೂರು: ನಗರ ಮತ್ತು ದ.ಕ.ಜಿಲ್ಲೆ ಹಾಗೂ ಹೊರಜಿಲ್ಲೆ, ಹೊರರಾಜ್ಯಗಳಲ್ಲಿ ನಡೆದ 35ಕ್ಕೂ ಅಧಿಕ ಕಳ್ಳತನ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ವ್ಯಕ್ತಿಯನ್ನು ಬೆಳ್ತಂಗಡಿ ನಿವಾಸಿ ಹಮೀದ್ (48) ಎಂದು ಗುರುತಿಸಲಾಗಿದೆ.

ನವೆಂಬರ್ 16ರ ತಡರಾತ್ರಿ ಕೆಎಸ್ ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಹೋಲ್ ಸೇಲ್ ಅಂಗಡಿಯಲ್ಲಿ ಸುಮಾರು 9 ಲಕ್ಷ ರೂ ಕಳವು ಮಾಡಿದ್ದು, ಹಣದಲ್ಲಿ ಆರೋಪಿ 3.20 ಲಕ್ಷ ರೂಪಾಯಿ ತೆಗೆದುಕೊಂಡು ಮೋಜುಮಸ್ತಿ ಮಾಡಿದ್ದ. ಉಳಿದ ಹಣವನ್ನು ತನಗೆ ಅಗತ್ಯವಿರುವ ಸಂದರ್ಭದಲ್ಲಿ ತೆಗೆದುಕೊಳ್ಳೋಣಾ ಅಂತ ನೆಲ್ಲಿಕಾಯಿ ರಸ್ತೆಯ ಕುಸಿದು ಬಿದಿದ್ದ ಪಾಳು ಕಟ್ಟಡದಲ್ಲಿ ಹುದುಗಿಸಿಟ್ಟು ತೆರಳಿದ್ದ.

ಕೆಲ ಸಮಯದ ಬಳಿಕ ತನ್ನಲ್ಲಿರುವ ಹಣ ಖಾಲಿಯಾಗುತ್ತಿದ್ದಂತೆ ಅರೋಪಿ ಹಮೀದ್​ ಹುದುಗಿಸಿಟ್ಟಿದ್ದ ಹಣವನ್ನು ಕೊಂಡೊಯ್ಯುವ ಯೋಜನೆ ಹಾಕಿ ಪಾಳು ಮನೆಯ ಬಳಿ ಆಗಮಿಸಿದ್ದ. ಆದರೆ ಪಾಳು ಬಿದ್ದ ಕಟ್ಟಡವನ್ನು ಮಾಲೀಕ ನೆಲಸಮ ಮಾಡಿದ್ದರು. ಆದರೆ ಅಂದು ಮನೆ ನೆಲಸಮ ಮಾಡುವ ವೇಳೆ ಭೂಮಿಯಲ್ಲಿಟ್ಟ ಹಣ ಜೆಸಿಬಿ ಆಪರೇಟರ್​​ ಕಣ್ಣಿಗೆ ಬಿದ್ದಿತ್ತು.

ಹಣ ನೋಡಿದ ಬಳಿಕ ಅಲ್ಲಿ ಕೆಲಸ ಮಾಡುವ ಎಲ್ಲ ಕೆಲಸಗಾರರನ್ನು ಕರೆದು ಹಣ ಹಂಚಿಕೊಂಡು ತಮಗೇನು ಗೊತ್ತೆ ಇಲ್ಲ ಎಂಬಂತೆ ಸುಮ್ಮನಾಗಿದ್ದರು. ಆದರೆ ಈ ನಡುವೆ ಪೊಲೀಸರು ಕಳ್ಳರ ಮೇಲೆ ನಿಗಾ ಇಟ್ಟಿದ್ದ ವೇಳೆ ಅರೋಪಿ ಹಮೀದ್ ಸಿಕ್ಕಿ ಬಿದ್ದಿದ್ದ. ಅಲ್ಲದೇ ವಿಚಾರಣೆ ವೇಳೆ ತಾನೇ ಹೂವಿನ ಅಂಗಡಿಯಲ್ಲಿ ಕಳ್ಳ ಮಾಡಿದ್ದು ಹಣವನ್ನು ಪಾಳು ಮನೆಯಲ್ಲಿ ಇಟ್ಟಿದ್ದಾಗಿ ತಿಳಿಸಿದ್ದ.

ಆರೋಪಿ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಮನೆ ತೆರವು ಮಾಡಿರುವುದು ಕಂಡು ಬಂದಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಅಂದು ಅಲ್ಲಿ ಕೆಲಸ ಮಾಡಿದ್ದ ಜೆಸಿಬಿ ಆಪರೇಟರ್​​ನನ್ನು ಕರೆದು ವಿಚಾರಣೆ ನಡೆಸಿದ ವೇಳೆ ಹಣ ಸಿಕ್ಕ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ, ನಮ್ಮ ಕುಟುಂಬದಲ್ಲಿ ಬಹಳ ಕಷ್ಟ ಇತ್ತು. ದೇವರೇ ನಮಗೆ ಹಣ ಕೊಟ್ಟ ಅಂತ ನಾವು ಕಷ್ಟಕ್ಕೆ ಬಳಕೆ ಮಾಡಿಕೊಂಡಿದ್ದೇವು ಎಂದು ಜೆಸಿಬಿ ಆಪರೇಟರ್​ ತಿಳಿಸಿದ್ದ. ಸದ್ಯ ಪೊಲೀಸರು ಕಳ್ಳತನವಾಗಿದ್ದ 9 ಲಕ್ಷ ರೂಪಾಯಿ ಹಣದಲ್ಲಿ 5.80 ಲಕ್ಷ ರೂಪಾಯಿಯನ್ನು ರಿಕವರಿ ಮಾಡಿದ್ದಾರೆ.

ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕುಖ್ಯಾತ ಕಳ್ಳನ ಮೇಲೆ ಈಗಾಗಲೇ ಜಿಲ್ಲೆಯಲ್ಲಿ 22 ವಾರೆಂಟ್ ಇರೋದು ಕೂಡ ತಿಳಿದು ಬಂದಿದೆ. ಅಲ್ಲದೇ ರಾಜ್ಯಾದಾದ್ಯಂತ ಸುಮಾರು 35ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆಯಂತೆ. ಸದ್ಯ ಪ್ರಕರಣಗಳ ಹೆಚ್ಚಿನ ತನಿಖೆಯನ್ನು ನಡೆಸಿರುವ ಪೊಲೀಸರು ಆರೋಪಿಯನ್ನು ಜೈಲಿಗೆ ತಳ್ಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!