February 3, 2026

ವಿಟ್ಲ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವಿಟ್ಲ ರೀಜಿನಲ್:
ಮೊಹಲ್ಲಾ ಲೀಡರ್ಸ್ ಮೀಟ್ ಮತ್ತು ಸನ್ಮಾನ ಕಾರ್ಯಕ್ರಮ

0
IMG-20230114-WA0012.jpg

ವಿಟ್ಲ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವಿಟ್ಲ ರೀಜಿನಲ್ ಇದರ ವತಿಯಿಂದ ಮೊಹಲ್ಲಾ ಲೀಡರ್ಸ್ ಮೀಟ್ ಕಾರ್ಯಕ್ರಮ ಒಕ್ಕೆತ್ತೂರು ಮದ್ರಸ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಂ ಎ ವಿಟ್ಲ ರಿಜೀನಲ್ ಅಧ್ಯಕ್ಷ ಅಬ್ದುಲ್ ಹಕೀಮ್ ಶಾಂತಿನಗರ ವಹಿಸಿದ್ದರು.‌
ವಾಲೆಮುಂಡೋವು ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಕಾರ್ಯಕ್ರಮವನ್ನು ಎಸ್ ಎಂ ಎ ರಾಜ್ಯ ಕೋಶಾದಿಕಾರಿ ಹಾಜಿ ಹಮೀದ್ ಕೋಡಂಗಾಯಿ ಉದ್ಘಾಟಿಸಿದರು. ಸಭೆಯಲ್ಲಿ ಬದುರುದ್ದೀನ್ ಅಹ್ಸನಿ ವಿಷಯ ಮಂಡನೆ ನಡೆಸಿದರು.

ಎಸ್ ಎಂ ಎ ರಾಜ್ಯ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಮದನಿ ಜಪ್ಪು, ಕೋಶಾಧಿಕಾರಿ ಹಾಜಿ ಹಮೀದ್ ಕೊಡಂಗಾಯಿ ಮತ್ತು ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಎಂ ಎ ಜಿಲ್ಲಾ ಅಧ್ಯಕ್ಷ ಸಾದತ್ ತಂಙಳ್, ಜಿಲ್ಲಾ ಕೋಶಾಧಿಕಾರಿ ಯೂಸುಫ್ ಸಾಜ, ಸುನ್ನಿ ಕೊಡಿನೇಷನ್ ಅಧ್ಯಕ್ಷ ಇಬ್ರಾಹಿಂ ಮದನಿ ಕಂಬಳಬೆಟ್ಟು, ಹಾಫಿಳ್ ಶರೀಫ್ ಸಖಾಫಿ, ಒಕ್ಕೆತ್ತೂರು ಮಸೀದಿ ಅಧ್ಯಕ್ಷರಾದ ಉಮ್ಮರ್, ಕಾರ್ಯದರ್ಶಿ ಇಕ್ಬಾಲ್ ಚಂದಳಿಕೆ, ಇಸ್ಮಾಯಿಲ್ ಸೂಪರ್, ಅಶ್ರಫ್ ಒಕ್ಕೆತ್ತೂರು, ಎಸ್ ಎಂ ಎ ಝೋನ್ ಕೋಶಾಧಿಕಾರಿ ಉಮ್ಮರ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ, ಎಸ್ ಜೆ ಎಂ ರೇಂಜ್ ಅಧ್ಯಕ್ಷ ಶರೀಫ್ ಮದನಿ ಹಾಗೂ ಎಲ್ಲಾ ಜಮಾತಿನ ಖತೀಬ್ ಉಸ್ತಾದರು ಹಾಗೂ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಎಸ್ ಎಂ ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಪ್ರಸ್ತಾವನೆ ಮಾಡಿದರು.
ಎಸ್ ಎಂ ಎ ವಿಟ್ಲ ರೀಜನಲ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಸಖಾಫಿ ಸ್ವಾಗತಿಸಿದರು. ಹಾರಿಸ್ ಮದನಿ ಶಾಂತಿನಗರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!