February 3, 2026

ಕಡಬ: ಗೂಡಂಗಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

0
Death_Photo121212121212_photo_pic

ಕಡಬ: ಗೂಡಂಗಡಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉದನೆಯ ನೇಲ್ಯಡ್ಕ ಎಂಬಲ್ಲಿ ನಡೆದಿದೆ.

ಮೃತರನ್ನು ನೇಲ್ಯಡ್ಕ ಗೂಡಂಗಡಿಯ ಲಾಲಿ ಶೆಟ್ರು ಎಂದು ಗುರುತಿಸಲಾಗಿದೆ. ಆದರೇ ಅವರ ನಿಜವಾದ ಹೆಸರು ಸ್ಥಳೀಯರಿಗೆ ಯಾರಿಗೂ ತಿಳಿದಿಲ್ಲ ಎನ್ನಲಾಗಿದೆ.

ಗೂಡಂಗಡಿ ಹೊಂದಿದ್ದ ಶೆಟ್ರು ಅದರಲ್ಲೇ ಮಲಗುತ್ತಿದ್ದು, ಮನೆಗೆ ತೆರಳುತ್ತಿರಲಿಲ್ಲ. ಕಳೆದ ಒಂದು ವಾರದಿಂದ ಗೂಡಂಗಡಿ ಬಾಗಿಲು ಹಾಕಿದ್ದು, ಇಂದು ಸ್ಥಳೀಯರಿಗೆ ಅಂಗಡಿಯ ಒಳಗಿನಿಂದ ದುರ್ವಾಸನೆ ಬಂದ ಹಿನ್ನೆಲೆ ಅಂಗಡಿಯ ಬಾಗಿಲು ಹೊಡೆದು ಒಳಗೆ ತೆರಳಿ ಪರಿಶೀಲಿಸಿದಾಗ ಮಲಗಿದ ಸ್ಥಿತಿಯಲ್ಲಿ ಕೊಳೆತ ಮೃತದೇಹ ಪತ್ತೆಯಾಗಿದೆನ್ನಲಾಗಿದೆ.

ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!