March 19, 2026

ಚಾಲಕನ ನಿಯಂತ್ರಣ ತಪ್ಪಿ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವ್ಯಾನ್ ಸ್ಕಾರ್ಪಿಯೋಗೆ
ಡಿಕ್ಕಿ: ಕೆಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

0
IMG-20230112-WA0039.jpg

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವ್ಯಾನ್ ದೇವರಕೊಲ್ಲಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಸಂಜೆ ವರದಿಯಾಗಿದೆ.
ಎಮ್ಮೆಮಾಡು ಪುಣ್ಯ ಸ್ಥಳವನ್ನು ಸಂದರ್ಶಿಸಿ ಬರುತ್ತಿದ್ದ ಮಂಗಳೂರು ಮೂಲದ ಪ್ರವಾಸಿಗರು ಈ ವ್ಯಾನ್ ನಲ್ಲಿ ಇದ್ದರು ಎನ್ನಲಾಗಿದೆ.

ಘಟನೆಯಿಂದ ಗಾಯಗೊಂಡಿದ್ದ ಕೆಲವು ಮಂದಿ ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದು ಸುಳ್ಯ ಕೆವಿಜಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ.

ಇಳಿಜಾರಿನಲ್ಲಿ ಬ್ರೇಕ್ ಸಿಗದ ಕಾರಣ ಚಾಲಕ ನಿಯಂತ್ರಣ ಕಳೆದುಕೊಂಡು ಸ್ಕಾರ್ಪಿಯೋ ವಾಹನಕ್ಕೆ ಡಿಕ್ಕಿ ಹೊಡೆದಿದು ಘಟನೆ ಸಂಭವಿಸಿದೆ ಎನ್ನಲಾಗಿದೆ.

ತಿಂಗಳಾಡಿ ಮತ್ತು ಬದಿಯಡ್ಕ ಮೂಲದವರು ಸ್ಕಾರ್ಪಿಯೋ ವಾಹನದಲ್ಲಿದ್ದು ಅದರಲ್ಲಿದ್ದ ನಾಲ್ಕು ಮಕ್ಕಳಿಗೂ ಸೇರಿದಂತೆ ಕೆಲವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು 2 ಅಂಬ್ಯಲೆನ್ಸ್, ಮತ್ತು ಪಿಕಪ್ ವಾಹನದಲ್ಲಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!