March 29, 2026

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ: ತಾಯಿ ಮಗುವಿಗೆ ಗಾಯ

0
IMG-20230112-WA0041.jpg

ಬಂಟ್ವಾಳ: ದ್ವಿಚಕ್ರವಾಹನವೊಂದಕ್ಕೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ತಾಯಿ ಮಗ ಇಬ್ಬರು ಗಾಯಗೊಂಡ ಘಟನೆ ಚೆಂಡ್ತಿಮಾರ್ ಎಂಬಲ್ಲಿ ನಡೆದಿದೆ. ಸರಪಾಡಿಗ್ರಾಮದ ವಚ್ಚಾರ್ ನಿವಾಸಿ ರಾಜೀವಿ ಹಾಗೂ ಅವರ ಮಗ ಸಂತೋಷ್ ಅಂಚನ್ ಗಾಯಗೊಂಡವರು. ಗಾಯಗೊಂಡವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಚೆಂಡ್ತಿಮಾರ್ ರಾಷ್ಟ್ರೀಯ ಹೆದ್ದಾರಿ ಎಂಬ ಆಘಾತ ಸಾರ್ವಜನಿಕ ವಲಯದಲ್ಲಿ ಉಂಟಾಗಿದೆ. ಇಂದು ಚೆಂಡ್ತಿಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು ನಾಲ್ಕು ಅಪಘಾತ ಗಳು ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇತ್ತೀಚಿಗೆ ಇದೇ ಚೆಂಡ್ತಿಮಾರ್ ಎಂಬಲ್ಲಿ ಅನೇಕ ಅಪಘಾತಗಳು ನಡೆದು ಜೀವಹಾನಿಯಾಗಿರುವ ಘಟನೆಗಳು ಇನ್ನೂ ಮಾಸಿಲ್ಲ.

ಪದೇ ಪದೇ ಇದೇ ಸ್ಪಾಟ್ ನಲ್ಲಿ ಅಪಘಾತ ನಡೆದು ಸ್ಪಾಟ್ ಡೆತ್ ಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಶಾಸಕ ರಾಜೇಶ್ ನಾಯ್ಕ್ ಹಾಗೂ ಅಧಿಕಾರಿಗಳು ಬೇಟಿ ನೀಡಿ ರಸ್ತೆಯಲ್ಲಿ ಸ್ಫೀಡ್ ಬೇಕರ್ ಹಾಕುವಂತೆ ಸೂಚನೆ ನೀಡಿದ್ದರು. ಸೂಚನಾ ಫಲಕ, ಸ್ಪೀಡ್ ಬೇಕರ್ ಹಾಕಿದ ಬಳಿಕವೂ ಇಲ್ಲಿ ಅಪಘಾತ ನಡೆಯುವುದು ಕಡಿಮೆಯಾಗದ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!