ಕಾಸರಗೋಡು: ಕಾರು ಮತ್ತು ಬೈಕ್ ನಡುವೆ ಅಪಘಾತ: ಅಬಕಾರಿ ದಳದ ಸಿಬ್ಬಂದಿ ಮೃತ್ಯು
ಕಾಸರಗೋಡು: ಪೆರಿಯದಲ್ಲಿ ಕಾರು ಮತ್ತು ಬೈಕ್ ನಡುವೆ ಉಂಟಾದ ಅಪಘಾತ ದಲ್ಲಿ ಅಬಕಾರಿ ದಳದ ಸಿಬ್ಬಂದಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಕಾಸರಗೋಡು ಅಬಕಾರಿ ದಳದ ಸಿಬಂದಿ ದಿಪಿನ್ ಕುಮಾರ್ (31) ಮೃತ ಪಟ್ಟವರು.
ಆಲಕ್ಕೋಡ್ ನಿವಾಸಿ ಯಾಗಿದ್ದ ದಿಪಿನ್ ಸಂಜೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಗಂಭೀರ ಗಾಯ ಗೊಂಡ ದಿಪಿನ್ ನನ್ನು ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತ ಪಟ್ಟಿದ್ದರು.
ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




