ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾರಾಮಾರಿ: ಇಬ್ಬರು ಮಹಿಳಾ ಕಾರ್ಯಕರ್ತೆಯರ ಬಂಧನ
ಬಳ್ಳಾರಿ: ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 3 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆಸಲಾಗಿತ್ತು.
ಈ ವೇಳೆ ಹೊಸಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಯೋಗಲಕ್ಷ್ಮಿ ಮತ್ತು ಶಿಲ್ಪಾ ನಡುವೆ ಮಾರಾಮಾರಿ ನಡೆದಿತ್ತು. ಕಲ್ಯಾಣ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಶಿಲ್ಪಾ, ಮತ್ತು ಯೋಗಲಕ್ಷ್ಮಿ ಹಾಗೂ ಸಂದೀಪ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಕೂಡ ನಡೆದಿತ್ತು.
ಆ ಬಳಿಕ ಶಿಲ್ಪಾ ಅವರು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯೋಗಲಕ್ಷ್ಮಿ ಮತ್ತು ಇತರರ ವಿರುದ್ಧ ದೂರು ಸಲ್ಲಿಸಿ, ಜಾತಿನಿಂದನೆ ಮತ್ತು ಮಾನಹಾನಿ ಪ್ರಕರಣ ದಾಖಲಿಸಿದ್ದರು.




