March 19, 2026

ಮಾಜಿ ಮುಖ್ಯಮಂತ್ರಿಯ ಮನೆಗೆ ದಾಳಿ ನಡೆಸಿ ಬೆಂಕಿ ಹಚ್ಚಿದ ಕಿಡಿಗೇಡಿಗಳು

0
image_editor_output_image210644712-1672812764579.jpg

ಅಗರ್ತಲಾ: ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಪೂರ್ವಜರ ಮನೆಗೆ ಮಂಗಳವಾರ ರಾತ್ರಿ ಕೆಲ ಕಿಡಿಗೇಡಿಗಳು ದಾಳಿ ನಡೆಸಿ ಬಳಿಕ ಬೆಂಕಿ ಹಚ್ಚಿದ್ದಾರೆ.

ತ್ರಿಪುರಾದ ಗೋಮತಿ ಜಿಲ್ಲೆಯ ಜಮ್ಜುರಿ ಗ್ರಾಮದಲ್ಲಿರುವ ದೇಬ್ ಅವರ ಪೂರ್ವಜರ ಮನೆಗೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ನಿವಾಸದ ಬಳಿಯಿದ್ದ ಕಾರು ಹಾಗೂ ಇತರ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವೀಡಿಯೋಗಳು ಹರಿದಾಡುತ್ತಿದ್ದು, ಮನೆ ಸೇರಿದಂತೆ ಪಕ್ಕದಲ್ಲಿದ್ದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!