ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪ್ರ.ಕಾರ್ಯದರ್ಶಿಯಾಗಿ ಜನಾಬ್ ಅಲ್ತಾಫ್ ತುಂಬೆ ಆಯ್ಕೆ
ಮಂಗಳೂರು: ಇತ್ತೀಚೆಗೆ ಸುಮಾ ಸಧನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ದ.ಕ.ಜೆಡಿಎಸ್ ಜಿಲ್ಲಾಧಕ್ಷ್ಯರಾದ ಶ್ರೀ ಜಾಕೆ ಮಾಧವಗೌಡರ ಸಮ್ಮುಖದಲ್ಲಿ ಮುಹಮ್ಮದ್ ಅಲ್ತಾಫ್ ರವರನ್ನು ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.
ಜನಾಬ್ ಅಲ್ತಾಫ್ ತುಂಬೆ ಮೂಲತ ತುಂಬೆ ಗ್ರಾಮದವರು ಪ್ರಸ್ತುತ ಮಂಗಳೂರು ದಕ್ಷಿಣ ಕ್ಷೇತ್ರ ಜನತಾದಳ ದ ಕಾರ್ಯಚಟುವಟಕೆ ಹಾಗೂ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿರುವುದೂ.
ಪಕ್ಷದ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಇವರ ಆಪ್ತ ಸಹಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಉದ್ದಗಳ ಸಂಚರಿಸಿ ಪಕ್ಷ ಕಟ್ಟುವಲ್ಲಿ ಯಶಸ್ವಿಯಾಗಿದ್ದು ಇದೀಗ ಇವರು ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರದ ಪ್ರ.ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ ಹೋರಾಟಗಾರ, ಜೆಡಿಎಸ್ ಸಂಘಟನಾ ಕಾರ್ಯದರ್ಶಿ, ಯುವ ನಾಯಕ ಮುಹಮ್ಮದ್ ಅಲ್ತಾಫ್ ತುಂಬೆ ಯವರನ್ನು ಆಯ್ಕೆ ಮಾಡಲಾಗಿದ್ದು,
ಅಲ್ತಾಫ್ ರವರು ಹಲವಾರು ಜನಪರ ಹೋರಾಟಗಳಲ್ಲಿ ಮುಂಚುಣಿಯಲ್ಲಿ ಗುರುತಿಸಿಕೊಂಡಿದ್ದರು.
ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕದ ವಿರುದ್ಧ ಸತ್ಯಾಗ್ರಹ ಚಳುವಳಿ, ಬ್ರಮ್ಮರಕೊಟ್ಲು ಅವೈಜಾನಿಕ ಟೋಲ್ ಗೇಟ್ ಮತ್ತು ಸುರತ್ಕಲ್ ಟೋಲ್ ಗೇಟ್ ವಿರುದ್ಧ ನಡೆದ ಸತತ ಪ್ರತಿಭನೆಯಲ್ಲಿ ಮುಂಚೂಣಿಯಲ್ಲಿದ್ದರು.
ಬಸ್ ದರ ಏರಿಕೆ ಅಡುಗೆ ಅನಿಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೇರಿಕೆ ವಿರುದ್ಧ ಪ್ರತಿಭಟನೆ, ರೈತರ ಹೋರಾಟಕ್ಕೆ ಬೆಂಬಲ ಜಾಥಾ, ಕರ್ನಾಟಕ ರಾಜ್ಯ ಋಣ ಮುಕ್ತಕ್ಕಾಗಿ ಹೋರಾಟ, ಲಾಕ್ ಡೌನ್ ಸಂದರ್ಭದಲ್ಲಿ ಮದರಸ ಮತ್ತು ಶಾಲಾ ಅಧ್ಯಾಪಕರ ಸಂಬಳ ವಿಳಂಬ ಮಾಡಿದರ ವಿರುದ್ಧ ಜನ ಜಾಗ್ರತಿ ಮತದಾನದ ಮಹತ್ವ ಹಾಗು ಗ್ರಾಮ ಪಂಚಾಯತ್ ಮುಖಾಂತರ ಯಾವೆಲ್ಲ ಸೌಲಭ್ಯ ಇದೆ ಅನ್ನುವುದನ್ನು ತುಂಬೆ ಗ್ರಾಮದ ಮನೆಮನೆಗೆ ಸಂಚರಿಸಿ ಅದರ ಸೌಲಭ್ಯ ಪಡೆಯಲು ಪ್ರೋತ್ಸಾಹ ನೀಡಿದ್ದರು.
ಜಾತ್ಯತೀತ ಜನತಾದಳದ ಸಂಘಟನಾ ಕಾರ್ಯದರ್ಶಿಯಾಗಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.




