November 22, 2024

ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ 12ನೇ ವಾರ್ಷಿಕೋತ್ಸವ ಸಮಾರಂಭ:
ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ ಮತ್ತು ಸಭಾಭವನದ ಉದ್ಘಾಟನೆ

0

ವಿಟ್ಲ: ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ 12ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು.‌ ಈ ಸಂದರ್ಭದಲ್ಲಿ ಎರಡನೇ ಅಂತಸ್ತಿನಲ್ಲಿ ನಿರ್ಮಿಸಲಾದ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯಗಳು ಮತ್ತು ಸಭಾಭವನದ ಉದ್ಘಾಟನಾ ಕಾರ್ಯಕ್ರಮಗಳು ಜರಗಿದವು.

ಅನುಗ್ರಹ ಕಾಲೇಜಿನಲ್ಲಿ 2018-19ರಿಂದ 2021-22ರವರೆಗಿನ ಶೈಕ್ಷಣಿಕ ವರ್ಷಗಳ ವಿದ್ಯಾರ್ಥಿನಿಯರ ಪದವಿ ಪ್ರದಾನ ಕಾರ್ಯಕ್ರಮ ಕೂಡ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಹಿನ್ ಶಿಕ್ಷಣ ಸಂಸ್ಥೆ ಬೀದರ್ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ ಪ್ರತಿಯೊಬ್ಬರೂ ಶಿಕ್ಷಣವನ್ನು ಹೊಂದುವುದರ ಜೊತೆಗೆ ಮಾನವೀಯ ಗುಣವನ್ನು ಬೆಳೆಸಬೇಕೆಂದು ಹೇಳಿದರು.

ಅಲ್ ಹಬೀಬ್ ಎಜುಕೇಶನ್ ಸೊಸೈಟಿ, ಶಿವಮೊಗ್ಗದ ನಿರ್ದೇಶಕರಾದ ಇಂಜಿನಿಯರ್ ಮುಹಮ್ಮದ್ ಇಬ್ರಾಹಿಂ ಮಾತನಾಡಿ ಎಲ್ಲರೂ ಪ್ರೀತಿ, ವಿಶ್ವಾಸ, ಬಾಂಧವ್ಯದೊಂದಿಗೆ ಬೆರೆತಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಬಹುದೆಂದು ಹೇಳಿದರು.

ಕಲ್ಲೂರು ಎಜುಕೇಶನ್ ಟ್ರಸ್ಟ್ ಮತ್ತು ಕಲ್ಲೂರು ಡೆವಲಪರ್ಸ್ ಕಾರವಾರ, ಇದರ ಅಧ್ಯಕ್ಷರಾದ ಪಿ.ಎಂ.ಜೆ.ಎಫ್, ಲಯನ್, ಡಾ. ಇಬ್ರಾಹಿಂ ಹಾಜಿ ಕಲ್ಲೂರ್ರ, ಅಬುಧಾಬಿಯ ಖಲೀಫ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ವಿಜ್ಞಾನಿ ಡಾ. ಎ. ಆರ್ ಬೇಗ್, ಶಾಂತಿ ಪ್ರಕಾಶನದ ಉಪಾಧ್ಯಕ್ಷ ಕೆ. ಎಂ ಷರೀಫ್, ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ, ಕಾಲೇಜಿನ ಮಾಜಿ ಪ್ರಾಂಶುಪಾಲೆ ಗೀತಾ ಜಿ. ಭಟ್, ವೇದಿಕೆಯಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಜೊತೆ ಕಾರ್ಯದರ್ಶಿ ಸುಲೈಮಾನ್ ಅಪೋಲೋ, ಖಜಾಂಚಿ ಹೈದರ್ ಅಲಿ, ಸದಸ್ಯರುಗಳಾದ ಅಬ್ದುಲ್ಲ ಕುಂಞ, ಅಬ್ದುಲ್ಲ ಚೆಂಡಾಡಿ, ಇಬ್ರಾಹಿಂ ಚೆಂಡಾಡಿ, ಮುಖ್ತಾರ್ ಅಹಮ್ಮದ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್ ವಹಿಸಿದ್ದರು.

ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಬಿ.ಡಿ ಇವರು 2022-23ನೇ ಸಾಲಿನ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಹಾಮಿದಾ ವಫ ಕಿರಾತ್ ಪಠಿಸಿದರು, ಕಾಲೇಜಿನ ಸಂಚಾಲಕ ಅಮಾನುಲ್ಲಾ ಖಾನ್ ರವರು ಸ್ವಾಗತಿಸಿ, ಇತಿಹಾಸ ಉಪನ್ಯಾಸಕಿ ಡಾ. ರಂಜಿತಾ ಎಂ ವಂದಿಸಿದರು. ಫಾತಿಮತ್ ಶೈಮ ಹಾಗೂ ಹಜೀರಾ ತಪ್ಸಿರ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನಫೀಸತ್ ಅಫ್ನ ಮತ್ತು ಕು. ಜಝೀಲ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!