March 26, 2026

ವಿಟ್ಲ: ಬೊಬ್ಬೆಕೇರಿ ಎಮಿನೆಂಟ್ ಎಜ್ಯುಕೇಶನ್ ಇಸ್ಟಿಟ್ಯೂಟ್ ನಲ್ಲಿ ವಾರ್ಷಿಕೋತ್ಸವ ಸಮಾರಂಭ

0
IMG-20221226-WA0020.jpg

ವಿಟ್ಲ: ವಿಟ್ಲ ಬೊಬ್ಬೆಕೇರಿ ಎಮಿನೆಂಟ್ ಎಜ್ಯುಕೇಶನ್ ಇಸ್ಟಿಟ್ಯೂಟ್ ನಲ್ಲಿ ವಾರ್ಷಿಕೋತ್ಸವ ಸಮಾರಂಭ ಭಾರತ್ ಆಡಿಟೋರಿಯಂ ಚಂದಳಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿ ಜಿವನದಲ್ಲಿ ಗುರಿ ಮುಖ್ಯ, ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸಿದರೆ ಗೆಲುವು ಸಾಧಿಸುವುದು ಮುಖ್ಯ ಎಂದರು.

ಸಂಸ್ಥೆಯ ಪ್ರಾಂಶುಪಾಲ ಝುಬೈರ್ ಅವರು ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ವಿವರಿಸಿದರು.

ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕಿರಣ್‍ಕುಮಾರ್ ಬ್ರಹ್ಮಾವರ, ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಜಯರಾಮ್ ರೈ, ಸೈಂಟ್ ರೀಟಾ ಶಾಲೆಯ ಮುಖ್ಯ ಶಿಕ್ಷಕ ಫಾದರ್ ಸುನಿಲ್ ಪ್ರವೀಣ್ ಪಿಂಟೋ,
ಟ್ವಾಕ್‍ ಝೀ ಸ್ಪೋಕನ್ ಇಂಗ್ಲಿಷ್ ಸಂಸ್ಥೆಯ ತನುಜ, ಮೆಲ್ಕಾರ್ ಎಮಿನೆಂಟ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಇರ್ಶಾದ್ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಾಪಕಿ ಖಸ್ಮುನ ಸ್ವಾಗತಿಸಿದರು. ಶಿಕ್ಷಕರಾದ ಅಲೈಣ ಬೀಬಿ,ಸೌಮ್ಯ.ಕೆ,ಬಹುಮಾನ ವಿತರಣಾ ಪಟ್ಟಿಯನ್ನು ಓದಿದರು. ಅಧ್ಯಾಪಕಿ ಗೌಸಿಯಾ ಬಾನು ಕಾಂರ್ಯಕ್ರಮವನ್ನು ನಿರೂಪಿಸಿದರು.

ಸಂಸ್ಥೆಯ 100% ಪಲಿತಾಂಶಕ್ಕಾಗಿ ಸತತವಾಗಿ 4 ವರ್ಷ ಶ್ರಮಿಸಿ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದ ಅಧ್ಯಾಪಕಿಯರಾದ ಖಸ್ಮುನ,ಗೌಸಿಯಾ ಬಾನು ಮತ್ತು ಅಲೈಣ ಬೀಬಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!