February 4, 2026

ಮಂಗಳೂರು: ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟ : ನಾಲ್ವರು ಆರೋಪಿಗಳ ಬಂಧನ: ಕೊಣಾಜೆ ಪೊಲೀಸರಿಂದ ಕಾರ್ಯಚರಣೆ

0
IMG-20221226-WA0016.jpg

ಮಂಗಳೂರು: ಕಾರಿನಲ್ಲಿ ಲಕ್ಷಾಂತರ ರೂ ಮೌಲ್ಯದ ಗಾಂಜಾ ಸಾಗಾಣಿಕೆಗೆ ಯತ್ನಿಸಿದ ನಾಲ್ವರು ಆರೋಪಿಗಳ ಸಹಿತ ಸೊತ್ತುಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಮಹಮ್ಮದ್ ನೌಫಲ್,ಜಂಶೀರ್ ಎಂ, ಮಹಮ್ಮದ್ ಭಾತೀಶ, ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ 32 ಕೆಜಿ ತೂಕದ 3 ಲಕ್ಷ 19ಸಾವಿರ ಮೌಲ್ಯದ ನಿಷೇದಿತ ಮಾದಕ ದ್ರವ್ಯವನ್ನು ಹಾಗೂ ಆರೋಪಿಗಳು ಬಳಸಿದ 13 ಸಾವಿರ ಮೌಲ್ಯದ 4 ಮೊಬೈಲ್ ಗಳ ಜೊತೆಗೆ 3ಲಕ್ಷ ಮೌಲ್ಯದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾರುತಿ ಸುಜುಕಿ ಅಲೋ 800 ಕಾರಿನಲ್ಲಿ, ಮಾದಕ ವಸ್ತು ಮತ್ತು ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿಯಂತೆ ಕೋಣಾಜೆ ಪೊಲೀಸ್ ಠಾಣೆಯ ಪೋಲೀಸರ ತಂಡ ದಾಳಿ ನಡೆಸಿತ್ತು.

ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿರವರು ರೌಂಡ್ಸ್ ನಲ್ಲಿದ ವೇಳೆ ಬೆಂಗಳೂರಿಂದ ಉಪ್ಪಿನಂಗಡಿ, ಮೇಲ್ಮಾರ್, ಬೋಳಿಯಾರು ಮಾರ್ಗವಾಗಿ ಕೇರಳ ಕಡೆಗೆ ಮಾರುತಿ ಸುಜುಕಿ ಅಲೋ 800 ಕಾರಿನಲ್ಲಿ, ಮಾದಕ ವಸ್ತು ಮತ್ತು ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಚೆಳೋರು ಚೆಕ್ ಪೋಸ್ಟ್ನ ಹತ್ತಿರ ದಾಳಿ ನಡೆಸಿದ್ದರು.

ಈ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್‌ ಆಯುಕ್ತರು (ಕಾನೂನು ಮತ್ತು ಸುಮ್ಮನೆ), ಉಪ ಪೊಲೀಸ್‌ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಸಹಾಯಕ ಪೊಲೀಸ್‌ ಆಯುಕ್ತರಾದ ದಿನಕರ ಶೆಟ್ಟಿ, ರವರ ಮಾರ್ಗದರ್ಶನದಲ್ಲಿ, ಕೊಣಾಜೆ ಪೊಲೀಸ್‌ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ರವರ ನೇತೃತ್ವದಲ್ಲಿ, ಪಿ.ಎಸ್.ಐ ರವರಾದ ಶರಣಪ್ಪ ಭಂಡಾರಿ ಸಿಬ್ಬಂದಿದಾರರಾದ ಶೈಲೇಂದ್ರ, ಮಹಮ್ಮದ್ ಶರೀಫ್, ಮಹೇಶ್, ಪುರುಷೋತ್ತಮ, ದೀಪಕ್ ಆಶ್ವಿನ್, ಸುರೇಶ್, ಅಂಬರೀಶ್, ಭರಮ ಬಡಿಗೇರ್, ರೇಷ್ಮಾ, ಸುನೀತಾ ಭಾಗಿಯಾಗಿದ್ದಾರೆ.,

Leave a Reply

Your email address will not be published. Required fields are marked *

You may have missed

error: Content is protected !!