March 26, 2026

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಗೂಡ್ಸ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

0
image_editor_output_image452979032-1671983065787

ಬೆಳ್ತಂಗಡಿ; ಸ್ಕೂಟರ್ ಗೆ ‌ಗೂಡ್ಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಇದೀಗ ಕಾಶಿಬೆಟ್ಟು ಪ್ರಸನ್ನ ಕಾಲೇಜು ಬಳಿ ನಡೆದಿದೆ.

ಪುರುಷೋತ್ತಮ‌ ಪೂಜಾರಿ(20) ಮೃತ ದುರ್ದೈವಿ. ಚಾರ್ಮಾಡಿಯ ನಿವಾಸಿ ಇವರು ಎನ್ನಲಾಗಿದೆ.

ಉಜಿರೆಯಿಂದ ಬೆಳ್ತಂಗಡಿ ಕಡೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಗೂಡ್ಸ್ ವಾಹನ ಢಿಕ್ಕಿಯಾಗಿದೆ.ಅಪಘಾತದ ವೇಳೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿದ್ದ ಯುವಕನಿಗೆ ತಕ್ಷಣ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ವೇಳೆ ಆತ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಬೆಳ್ತಂಗಡಿ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!