March 26, 2026

ಬಂಟ್ವಾಳ: ಬೈಕ್ ಢಿಕ್ಕಿ: ಪಾದಾಚಾರಿ ಮಹಿಳೆ ಮೃತ್ಯು

0
IMG-20221225-WA0051.jpg

ಬಂಟ್ವಾಳ: ಪಾದಾಚಾರಿ ಮಹಿಳೆಯೋರ್ವರಿಗೆ ದ್ವಿಚಕ್ರವಾಹನ ಢಿಕ್ಕಿಯಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಪೆರ್ಲ ಚರ್ಚ್ ಬಳಿ ನಡೆದಿದೆ.

ನಾವೂರ ನಿವಾಸಿ ಉಮಾವತಿ (50) ಮೃತಪಟ್ಟ ಮಹಿಳೆ.

ಉಮಾವತಿ ಅವರು ಪೆರ್ಲ ಅಂಗಡಿಯೊಂದಕ್ಕೆ ಹೋಗಿದ್ದು, ವಾಪಾಸು ಮನೆಗೆ ಹೋಗುವ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಸವಾರ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ತೀವ್ರತೆಗೆ ಮಹಿಳೆ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಮಹಿಳೆ ಎರಡು ವರ್ಷಗಳ ಹಿಂದೆ ಗಂಡನನ್ನು ಕೊಂದು ಜೈಲು ಶಿಕ್ಷೆ ಅನುಭವಿಸಿದ್ದರು.

ಸ್ಥಳಕ್ಕೆ ಟ್ರಾಪಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!