ಬಂಟ್ವಾಳ: ಸಹಕಾರಿ ಸಂಘದಲ್ಲಿ ವಂಚನೆ: ಸಿಬ್ಬಂದಿ- ಸಂಘದ ಸದಸ್ಯರ ನಡುವೆ ಮಾತಿನಚಕಮಕಿ
ಬಂಟ್ವಾಳ: ಪೂಂಜಾಲಕಟ್ಟೆ ಸಹಕಾರಿ ಸಂಘದಲ್ಲಿ ವಂಚನೆ ನಡೆಸಿದ ವಿಚಾರವಾಗಿ ಸಿಬಂದಿಯನ್ನು ಸಂಘದ ಸದಸ್ಯರೋರ್ವರು ತರಾಟೆಗೆ ತೆಗೆದು ಕೊಂಡು ತಳ್ಳಿರುವ ಘಟನೆ ಬುಧವಾರ ಸಂಘದ ಅವರಣದಲ್ಲಿ ನಡೆದಿದ್ದು, ಈ ಹೈಡ್ರಾಮದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಟ್ವಾಳ ತಾಲೂಕಿನ ಕಾವಳ ಮೂಡೂರು ವ್ಯ.ಸೇ.ಸ. ಸಂಘದಲ್ಲಿ ಸದಸ್ಯ ಗ್ರಾಹಕರನ್ನೇ ವಂಚಿಸಿ ಸಾಲ ಮಾಡಲಾಗಿದೆ ಎಂಬ ಆರೋಪದಲ್ಲಿ ಸದಸ್ಯ ಗ್ರಾಹಕರೋರ್ವರು ಆಕ್ರೋಶಿತ ರಾಗಿ ಸಂಘದ ಹೊರ ಭಾಗದ ಬಾಗಿಲಲ್ಲಿ ನಿಂತಿದ್ದ ಸಿಬಂದಿಗಳನ್ನು ತರಾಟೆಗೆ ತೆಗೆದು ನಮ್ಮ ಹೆಸರಲ್ಲಿ ಲಕ್ಷಾಂತರ ಸಾಲ ಪಡೆದು ನಮ್ಮನ್ನು ವಂಚಿಸಿದ್ದಿಯಾ ಈ ಸಾಲ ಯಾವಾಗ ಮರುಪಾವತಿ ಮಾಡುತ್ತಿ ಎಂದು ಆಕ್ರೋಶ ಭರಿತರಾಗಿ ಸಿಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗಿ ಎಳೆದಾಡಿದರು.
ಈ ಸಂದರ್ಭ ಸಂಘದಲ್ಲಿ ನಡೆದಿದೆ ಎನ್ನಲಾದ ಹಣ ದುರು ಪಯೋಗದ ಕುರಿತಾಗಿ ಹೈಕೋರ್ಟ್ ಆದೇಶದಂತೆ ವಿಚಾರಣೆ ನಡೆಸುತ್ತಿದ್ದ ಸಹಕಾರ ಸಂಘದ ಅಧಿಕಾರಿ ಮಧ್ಯಪ್ರವೇಶಿಸಿ ವಿಚಾರಣೆಗಾಗಿ ಬಂದಿರುವ ಹಿನ್ನೆಲೆಯಲ್ಲಿ ತನ್ನ ಮುಂದೆ ಹೇಳಿಕೆ ನೀಡುವಂತೆ ಸೂಚಿಸಿದಂತೆ ಸದಸ್ಯ ಗ್ರಾಹಕ ವಿಚಾರಣಾಧಿಕಾರಿ ಬಳಿ ತೆರಳಿದರು. ಬಳಿಕ ಸಿಬಂದಿ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರಕ್ಕೆ ದಾಖ ಲಾಗಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಗೆ ಮಾಹಿತಿ ಹೋಗಿದ್ದು, ಪ್ರಕರಣ ದಾಖಲಾಗಿಲ್ಲ.




