August 20, 2026

ಕಾರವಾರ: ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು:
ದಂಪತಿಗಳು ಇಬ್ಬರು ಮೃತ್ಯು

0
n33286049416369682197234fa206b801035236965e16a4213170804b272809811839cd05fc7e3d189903d8.jpg

ಕಾರವಾರ: ಸಂಬಂಧಿಕರೊಬ್ಬರು ಮೃತಪಟ್ಟ ಕಾರಣ ಅವರ ಅಂತ್ಯಕ್ರಿಯೆಗೆ ತೆರಳುವ ವೇಳೆ ಕರವಳ್ಳಿಯಲ್ಲಿಗೆ ತಮ್ಮ ಕಾರಿನಲ್ಲಿ ನಿವೃತ್ತ ಯೋಧರೊಬ್ಬರು ಪತ್ನಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮುಂಡಗೋಡದ ಅಮ್ಮಾಜಿ ಕೆರೆಯ ಬಳಿಯಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ದಂಪತಿಗಳಿಬ್ಬರು ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಸಿಆರ್ ಪಿ ಎಪ್ ಯೋಧರಾಗಿ ನಿವೃತ್ತರಾಗಿದ್ದಂತ ರಾಜು ವರ್ಗೀಸ್ ಹಾಗೂ ಅವರ ಪತ್ನಿ ಬ್ಲೆಸ್ಸಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮುಂಡಗೋಡ ತಾಲೂಕಿನ ಅರಶಣಗೇರಿಯವರಾಗಿದ್ದ ಅವರು, ಸಂಬಂಧಿಕರೊಬ್ಬರು ತೀರಿಕೊಂಡ ಕಾರಣ, ಕರವಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಮುಂಡಗೋಡದ ಅಮ್ಮಾಜಿ ಕೆರೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಕೆರೆಗೆ ಉರುಳಿ ಬಿದ್ದಿದೆ.

ಕಾರು ಕೆರೆಗೆ ಉರುಳಿ ಬಿದ್ದದ್ದನ್ನು ಕಂಡಂತ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರು ಉಲ್ಟಾ ತಿರುಗಿ ಬಿದ್ದ ಕಾರಣ ಭಾಗಿಲು ತೆಗೆಯಲಾಗದೇ ನೀರಲ್ಲಿ ಮುಳುಗಿ ರಾಜು ವರ್ಗೀಸ್ ಹಾಗೂ ಬೆಸ್ಲಿ ದಂಪತಿಗಳು ಮೃತಪಟ್ಟಿದ್ದಾರೆ. ಆಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!