February 3, 2026

ಆಟವಾಡುತ್ತಿದ್ದಾಗ ಬಂದೂಕು ಸಿಡಿದು ಬಾಲಕ ಮೃತ್ಯು

0
IMG-20221218-WA0014.jpg

ರಾಮನಗರ: ನಾಡ ಬಂದೂಕಿನಲ್ಲಿ ಆಟವಾಡುತ್ತಿದ್ದಾಗ, ಆಕಸ್ಮಿಕ ಸಿಡಿದು 7 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಕಾಡಶಿವನಹಳ್ಳಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೂಲದ ಅಮಿನುಲ್ಲಾ, ಸಮ್‌ಸೂನ್‌​ ಕುಟುಂಬ 3 ದಿನದ ಹಿಂದೆ ಕೂಲಿ ಕೆಲಸಕ್ಕೆಂದು ಇಲ್ಲಿಗೆ ಬಂದಿದ್ದು, ತಂದೆತಾಯಿ ಕೆಲಸದಲ್ಲಿ ನಿರತರಾಗಿದ್ದರು. ಆ ವೇಳೆ 16 ವರ್ಷದ ಮಗ ಸಾಜೀದ್‌ ಬಂದೂಕಿನ ಟ್ರಿಗರ್‌ ಒತ್ತಿದ್ದು, ಶಮಾ ಮೇಲೆ ಗುಂಡು ಸಿಡಿದು ಪ್ರಾಣಬಿಟ್ಟಿದ್ದಾನೆ.

ಸುರಕ್ಷತಾ ನಿಯಮ ಪಾಲಿಸದ ಕಾರಣ ತೋಟದ ಮಾಲೀಕ ಮಲ್ಲೇಶ್‌ನನ್ನು ಹಾಗೂ ಗುಂಡು ಹಾರಿಸಿದ ಬಾಲಕ ಸಾಜೀದ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!