March 20, 2026

ಶಾಲಾ ಕ್ರೀಡಾಕೂಟದಲ್ಲಿ ಬಾಲಕನಿಗೆ ಚುಚ್ಚಿದ ಜಾವೆಲಿನ್ ತ್ರೋ: 9 ನೇ ತರಗತಿ ಬಾಲಕ ಆಸ್ಪತ್ರೆಗೆ ದಾಖಲು

0
IMG-20221217-WA0023.jpg

ಒಡಿಶಾ: ಒಡಿಶಾದ ಅಗಲ್​ಪುರದಲ್ಲಿ ಬಾಲಕರ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಯೊಬ್ಬನ ಕುತ್ತಿಗೆಗೆ ಚಾವೆಲಿನ್ ಚುಚ್ಚಿರುವ ಘಟನೆ ನಡೆದಿದೆ.

ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಜಾವೆಲಿನ್ ತ್ರೋ ಮಾಡಿದ್ದು, ಮೈದಾನದಲ್ಲಿದ್ದ 9 ನೇ ತರಗತಿ ವಿದ್ಯಾರ್ಥಿ ಸದಾನಂದ ಮೆಹರ್ ಕುತ್ತಿಗೆಗೆ ಚುಚ್ಚಿದೆ.

ಇನ್ನು ಬಾಲಕನನ್ನು ತಕ್ಷಣವೇ ಭಿಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!