ಹನಿಮೂನ್ ಗೆ ತೆರಳಿದ್ದ ವೇಳೆ ರಸ್ತೆ ಅಪಘಾತ: ಪತಿ ಮೃತ್ಯು, ಪತ್ನಿ ಅಪಾಯದಿಂದ ಪಾರು
ದಾವಣಗೆರೆ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ನಡೆದಿದೆ.
ಮೃತರನ್ನು ಸಂಜಯ್ (28) ಎಂದು ಗುರುತಿಸಲಾಗಿದೆ. ಇವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದವರಾಗಿದ್ದರು.
ನ. 28ರಂದು ಬೈಲಹೊಂಗಲದ ಪ್ರೀತಿ ಎಂಬವರನ್ನು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು.
ಇವರಿಬ್ಬರು ಕೂಡ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹನಿಮೂನ್‌ಗೆಂದು ಬೈಕ್‌ನಲ್ಲಿ ಡಿ. 10ಕ್ಕೆ ಹರಿಹರದ ಜಿಗಳಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಬೈಕ್‌ನಲ್ಲಿ ಎರಡು ದಿನಗಳ ಕಾಲ ಹೋಗಿದ್ದರು.




